ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಅಂಕೋಲಾ(Ankola) : ರಾಷ್ಟ್ರೀಯ ಹೆದ್ದಾರಿ 52(NH 52) ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ(Uttarakannada District Ankola Taluku) ಕಂಚಿನಬಾಗಿಲು ಬಳಿ ರಾಸಾಯನಿಕ ತುಂಬಿದ ಟ್ಯಾಂಕರ್(Chemical Tanker) ಪಲ್ಟಿಯಾಗಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
.
ಪರಿಣಾಮವಾಗಿ ಟ್ಯಾಂಕರ್ ಸಂಪೂರ್ಣ ಧಗಧಗನೆ ಹೊತ್ತಿ ಉರಿಯುತ್ತಿದೆ. ಬೆಂಕಿಯ ತೀವ್ರತೆಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಹನ ಪಲ್ಟಿಯಾದ ತಕ್ಷಣ ಟ್ಯಾಂಕರ್ ಚಾಲಕನ ಜಿಗಿದಿದ್ದ. ಹೀಗಾಗಿ ಆತನಿಗೆ ಗಂಭೀರ ಗಾಯವಾಗಿದ್ದು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯಿಂದ ಮಂಗಳೂರು ಕಡೆಗೆ(Belagavi to Mangalore) ಆ್ಯಸಿಡ್ ತುಂಬಿಕೊಂಡು ಟ್ಯಾಂಕರ್ ತೆರಳುತಿತ್ತು ಎನ್ನಲಾಗಿದೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು(Ankola Police) ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು(Fire Brigade) ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಒಂದು ಹಂತದಲ್ಲಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನಲಾಗಿದೆ.
ಇದನ್ನು ಓದಿ : ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ. ನ್ಯಾಯಾಲಯ ತೀರ್ಪು.

