ಭಟ್ಕಳ (BHATKAL): ತಾಲೂಕಿನ ಬೆಣಂದೂರು ಗ್ರಾಮದ ಯುವಕನೋರ್ವ ರೇಲ್ವೆ ಹಳಿ(RAILWAY TRACK) ಪಕ್ಕದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ

ಗಿರೀಶ್ ಪಾಂಡು ಜೋಗಿ (24) ಮೃತ ಯುವಕ ಎಂದು ಗುರುತಿಸಲಾಗಿದೆ. ಬೆಣಂದೂರಿನ ಆಶಿಕಾನ್ ನಿವಾಸಿ. ಗೊರಟೆ ಸಮೀಪದ ರೈಲ್ವೆ ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸೋಮವಾರ ಸಂಜೆ ಗಿರೀಶ್ ಮನೆಯಿಂದ ಹೊರ ಹೋಗಿದ್ದ. ಸ್ವಲ್ಪ ಮದ್ಯಪಾನ ಮಾಡುತ್ತಿದ್ದ ಈತ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಯಾವುದೋ ರೈಲು ಬಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ

ಇಂದು ಬೆಳಿಗ್ಗೆ ರೈಲ್ವೆ ಹಳಿಯ ಪಕ್ಕದಲ್ಲಿ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು(BHATKAL RURAL STATION) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಅಜಾಗರುಕತೆ ಬೈಕ್ ರೈಡ್. ಸವಾರ ಸಾವು

ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ಅಂಗನವಾಡಿಗೆ ಗಟ್ಟಿ ಬೆಲ್ಲ. ಗೃಹಲಕ್ಷ್ಮಿ ನಿರಂತರ