ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ(Haliyal) : ಕೇಂದ್ರದ ನವೋದಯ ವಿದ್ಯಾಲಯದ ಪ್ರವೇಶಾತಿ ಪರೀಕ್ಷೆಯಲ್ಲಿ(Navodaya Examination) ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರದಲ್ಲೇ ಶಿಕ್ಷಕನೊಬ್ಬ ತನ್ನ ಮಗನಿಗೆ ನಕಲು ಪೂರೈಸಿರುವ(Copy Supply) ಆರೋಪವನ್ನ ಪಾಲಕರು ಮಾಡಿದ ಘಟನೆ ನಡೆದಿದೆ.
ಹಳಿಯಾಳದ ಕಾರ್ಮೇಲ್ ಪ್ರಾಥಮಿಕ ಶಾಲೆ(Haliyal Carmel Primary School) ಹಾಗೂ ಪಕ್ಕದ ಸೆಂಟ್ ಮಿಲಾಗ್ರಿಸ್ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆಯ ವೇಳೆ ಶಿಕ್ಷಕನ ಕರಾಮತ್ತು ಬೆಳಕಿಗೆ ಬಂದಿದೆ. ಕಾರ್ಮೇಲ್ ಶಾಲೆಯಲ್ಲಿ ಗುರುತಿಸಲಾದ 10 ಬ್ಲಾಕ್‌ಗಳಲ್ಲಿ ಒಟ್ಟು 240 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಮೂರು ಬ್ಲಾಕ್‌ಗಳಲ್ಲಿ ಕೆಲವು ಆಯ್ದ ಮಕ್ಕಳಿಗೆ ನಕಲು ಮಾಡಲು ಅವಕಾಶ ನೀಡಲಾಗಿದೆ ಎಂಬ ದೂರು ಪಾಲಕರಿಂದ ಕೇಳಿಬಂದಿದೆ. ಈ ಸಂಬಂಧ ಕಾರ್ಮೇಲ್ ಶಾಲೆಯ ಶಿಕ್ಷಕ ಚರ್ಚಿಲ್ ಸಂತಾನ ದಾಲ್ಮೆತ್ ವಿರುದ್ಧ ಪಾಲಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಶಿಕ್ಷಕನ ಮಗನೂ ಸಹ ನವೋದಯ ಶಾಲಾ ಪ್ರವೇಶ ಪರೀಕ್ಷೆಯ(Navodaya School Entrance Exam) ಪರೀಕ್ಷಾರ್ಥಿಯಾಗಿದ್ದು, ಚರ್ಚಿಲ್ ಸಂತಾನ ದಾಲ್ಮೆತ್ ಕಾರ್ಮೇಲ್ ಶಾಲೆಯ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರಿಗೆ ರಿಲೀವರ್ ಆಗಿ ಬಂದಿದ್ದನು ಎನ್ನಲಾಗಿದೆ. ಈ ವೇಳೆ ತನ್ನ ಮಗನ ಪ್ರಶ್ನೆಪತ್ರಿಕೆಯನ್ನು ಹೊರಗೆ ತಂದು ಉತ್ತರಗಳನ್ನು ಗುರುತಿಸಿ, ಮಗನಿಗೆ ನಕಲು ಮಾಡಿಸಿದ್ದನ್ನು ಶಿಕ್ಷಕ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಇದೇ ವೇಳೆ, ಶಿಕ್ಷಕ ಚರ್ಚಿಲ್ ಕರಾಮತ್ತಿನ ಬಗ್ಗೆ ಪಾಲಕರು ಬಹಿರಂಗಪಡಿಸಿದ್ದು, ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಪ್ರತಿಭಟನಾನಿರತ ಗಿರಿಜಾ ಎಸ್. ಹಿರೇಮಠ ಅವರು ಶಾಲೆಯ ಮುಖ್ಯೋಪಾಧ್ಯಾಯರಿಗೆ ಲಿಖಿತ ದೂರು ಸಲ್ಲಿಸಿದ್ದು, ನ್ಯಾಯಯುತ ತನಿಖೆ ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಹಳಿಯಾಳ ಬಿಇಒ(Haliyal BEO), ಮೇಲಾಧಿಕಾರಿಗೆ ಸಂಪೂರ್ಣ ವರದಿ ಸಲ್ಲಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಲ್ಲದೇ, ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರೀಕ್ಷಾರ್ಥಿ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ತಡೆಹಿಡಿಯಲು ಸೂಚಿಸಲಾಗಿದ್ದು, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವೋದಯ ಶಾಲಾ ಪ್ರವೇಶ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ತಂದ ಈ ಘಟನೆ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇದನ್ನು ಓದಿ : ಕಟ್ಟಿಗೆ ಮಿಲ್ಲಿಗೆ ಭಾರೀ ಬೆಂಕಿ; ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ.
