ಕಾರವಾರ(KARWAR) : ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ರಾ. ಹೆದ್ದಾರಿ 66 (NATIONAL HIGHWAY 66) ರಲ್ಲಿ ಸಂಭವಿಸಿದೆ.
ತಾಲೂಕಿನ ಗಾಂವಗೇರಿ(GAMVGERI) ಬಳಿ ಈ ಅಪಘಾತ ಸಂಭವಿಸಿದೆ. ಕಾಜುಭಾಗ(KAJUBHAG) ನಿವಾಸಿ ವಿನೋದ ನಾಯ್ಕ(30) ಸಾವನ್ನಪ್ಪಿದ ದುರ್ದೈವಿ. ಸವಾರ ಗಾಂವಗೇರಿ ಕಡೆಯಿಂದ ಹೆದ್ದಾರಿ ಕಡೆ ಬರುತ್ತಿದ್ದಾಗ ಗೋವಾ(GOA)ದಿಂದ ಬರುತ್ತಿದ್ದ ಬಲೆನೋ ಕಾರು ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಚಿತ್ತಾಕುಲ ಪೋಲೀಸ(CHITTAKUL POLICE)ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.