ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದ ಹೃದಯಭಾಗದಲ್ಲಿರುವ ಶ್ರೀ ರಾಧಾಕೃಷ್ಣ ದೇವಾಲಯದಲ್ಲಿ(Radhakrishns Temple) ಕಳ್ಳರು ಕಳ್ಳತನಗೈದ(Theft) ಘಟನೆ ಸೋಮವಾರ ರಾತ್ರಿ ನಡೆದಿದೆ.

ದೇವಾಲಯದ ಹಿಂಭಾಗದಲ್ಲಿ ಮಹಡಿ ಏರಿದ ಕಳ್ಳರು ಹೆಂಚನ್ನು ತೆಗೆದು ಒಳ ನುಗ್ಗಿದ್ದಾರೆ. ಬಳಿಕ ದೇವರ ಗರ್ಭಗುಡಿ ಪ್ರವೇಶಿಸಿದ್ದಾರೆ. ನಂತರ ಕಪಾಟಿನಲ್ಲಿದ್ದ ದೇವರ ಬೆಳ್ಳಿಯ(Silver) ಪತಾಕೆ, ಛತ್ರಿ ಸೇರಿದಂತೆ ಬಂಗಾರದ ನಾಮಗಳನ್ನು ಕದ್ದೊಯ್ದಿದ್ದಾರೆ.

ದೇವರ ಕೃತಕ ಆಭರಣಗಳನ್ನ(Artificial Ornaments) ಖಚಿತಪಡಿಸಿಕೊಂಡ ಕಳ್ಳರು ಕೆಲ ವಸ್ತುಗಳನ್ನ ಕದ್ದೊಯ್ದಿದ್ದಾರೆ. ನಿನ್ನೆ ರಾತ್ರಿ ಪೂಜೆ ಮುಗಿಸಿ ದೇವಾಲಯದ ಬೀಗ ಹಾಕಿ ಹೋದ ಅರ್ಚಕರು ಇಂದು ಬೆಳಿಗ್ಗೆ ದೇವಾಲಯಕ್ಕೆ ಬಂದಾಗ ಘಟನೆ ಗೊತ್ತಾಗಿದೆ. ತಕ್ಷಣ ದೇವಾಲಯ ಸಮಿತಿಯವರಿಗೆ(Temple Comitee) ತಿಳಿಸಿದಾಗ ಕಾರವಾರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಕಾರವಾರ ನಗರ ಠಾಣೆ(Karwar Town Station) ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಮೇಲ್ಭಾಗದಿಂದ ಕೆಳಕ್ಕೆ ಇಳಿಯುವಾಗ ಸಿಸಿ ಟಿವಿಯ ರಾಡ್ ಮುರಿದು ಇಳಿದಿರೋದು ಗೊತ್ತಾಗಿದೆ. ಬಳಿಕೆ ದೇವಸ್ಥಾನದ(Temple) ಬಲ ಬದಿಯ ಬಾಗಿಲ ಮೂಲಕ ಹೊರ ಹೋಗಿದ್ದಾರೆ.

ಕಳ್ಳತನ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು ಸಿಸಿಟಿವಿ(CCTV) ಪರಿಶೀಲಿಸುತ್ತಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ(Karwar Town Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಸ್ಕೂಟಿಗೆ ಟಿಪ್ಪರ್ ಡಿಕ್ಕಿ: ಮಹಿಳೆ ಸ್ಥಳದಲ್ಲಿ  ಸಾವು.  ಇಬ್ಬರಿಗೆ ಗಾಯ.

ಕರ್ತವ್ಯ ಲೋಪ, ಅಧಿಕಾರ ದುರುಪಯೋಗ. ಅಂಕೋಲಾ ಪುರಸಭೆ ಅಧ್ಯಕ್ಷ, ಸದಸ್ಯರ ವಿರುದ್ಧ ಲೋಕಾಯುಕ್ತರಲ್ಲಿ ದೂರು:  ಮಂಜುನಾಥ ನಾಯ್ಕ

ಕಾರವಾರ ಮತ್ತು ಗೋವಾ ಗಡಿಯಲ್ಲಿ ಪ್ರಧಾನಿ ಮೋದಿ ದೀಪಾವಳಿ ಆಚರಣೆ.