ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಜಮ್ಮು ಕಾಶ್ಮೀರ(Jammukashmira) :  ಪಹಲ್ಲಾಮ್‌ನಲ್ಲಿ  ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕ ಪ್ರವಾಸಿಗರು ಸೇರಿ  27ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಮಂಗಳವಾರ ಪ್ರವಾಸಿಗರನ್ನೆ ಟಾರ್ಗೆಟ್ ಮಾಡಿದ ಉಗ್ರರು  ಗುಂಡು ಹಾರಿಸಿದ್ದಾರೆ.  ಬೈಸರನ್‌ನಲ್ಲಿ ಸುಮಾರು ಮೂವರು ಉಗ್ರರು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.

ಪ್ರಸಿದ್ದ ಪ್ರವಾಸಿ ತಾಣವಾಗಿರುವ ಬೈಸರನ್ ಗೆ ಕಾಲ್ನಡಿಗೆಯಲ್ಲಿ ಮಾತ್ರ ಸಾಗಬಹುದಾಗಿದೆ. ಇಲ್ಲಿ ಉಗ್ರರ ದಾಳಿ(Terror Attack) ನಡೆದ ತಕ್ಷಣ ಪೊಲೀಸ್‌ ತಂಡವು ಸೇನೆ ಮತ್ತು ಅರೆಸೈನಿಕ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿದೆ. ಪ್ರವಾಸಿಗರನ್ನು ಸ್ಥಳಾಂತರಿಸುವ ಕಾರ್ಯವನ್ನು ಮೊದಲು ಮಾಡಿದೆ. ಹಾಗೆಯೇ ದಾಳಿಯ ಹಿಂದಿನ ಉಗ್ರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

  ಕಳೆದ ವರ್ಷ ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು, ಆಗ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದರು. ಈ ವರ್ಷ ಪ್ರವಾಸಿಗರ ಮೇಲೆ ನಡೆದ ಮೊದಲ ಉಗ್ರಗಾಮಿ ದಾಳಿಯಾಗಿದೆ.

ಜಮ್ಮು ಮತ್ತು ಕಾಶ್ಮೀರ (Jammu & Kashmira) ಪ್ರವಾಸಿಗರ ನೆಚ್ಚಿನ ಸ್ಥಳವಾಗಿರೋದ್ರಿಂದ ಹನಿಮೂನ್(Honeymoon), ಬೇಸಿಗೆ ರಜೆ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಕಾಶ್ಮೀರಕ್ಕೆ ಹೋಗುತ್ತಾರೆ.   ಜಮ್ಮುಕಾಶ್ಮೀರದಲ್ಲಿ ಸೆಕ್ಯುರಿಟಿ ಇನ್ನೂ ಬಲವಾಗಿದ್ದು,  ಕಾಶ್ಮೀರದ ಗಲ್ಲಿ ಗಲ್ಲಿಗಳಲ್ಲೂ  ಸೆಕ್ಯುರಿಟಿ ಬಿಗಿಯಾಗಿದ್ದಾಗಲೂ  ಟೆರರ್ ಅಟ್ಯಾಕ್‌ ಆಗಿರುವುದು ಬೆಚ್ಚಿ ಬೀಳಿಸಿದೆ.

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮಂಜುನಾಥ್‌ ರಾವ್ ಎಂಬವರು ಕೂಡಾ ಈ ದುರಂತದಲ್ಲಿ ಸಾವನ್ನಪ್ಪಿದ್ದು, ಹಲವಾರು ಭಾರತೀಯರು ಕೂಡಾ ಸಾವನ್ನಪ್ಪಿದ್ದಾರೆ. ಆದ್ರೆ ಇದೀಗ ಕೇವಲ ಭಾರತೀಯರು (Indian Tourist) ಮಾತ್ರವಲ್ಲ ವಿದೇಶಿಯರು ಕೂಡಾ ಈ ದುರಂತದಲ್ಲಿ ಸಾವನ್ನಪ್ಪಿದ್ದಾಗಿ ಗೊತ್ತಾಗಿದೆ.

ಇದನ್ನು ಓದಿ : ಮಾಜಾಳಿ ಬಳಿ ಪೈರಿಂಗ್. ಆರೋಪಿಗೆ ತಕ್ಕ ಉತ್ತರ ನೀಡಿದ ಪೊಲೀಸರು. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯ.

ಹೊನ್ನಾವರದಲ್ಲಿ ಭೀಕರ ಅಪಘಾತ. ಇಬ್ಬರ ದುರ್ಮರಣ. ಹಲವರಿಗೆ ಗಾಯ.