ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮೈಸೂರು(Mysore) : ಸುಮಾರು ಆರು ದಶಕಗಳ ಕಾಲ ಜನರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ(Playback Singer) ನಿಧನರಾಗಿದ್ದಾರೆ.
ಅವರಿಗೆ 88 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ(SouthIndia) ಚಿತ್ರರಂಗದ ಹಿನ್ನೆಲೆ ಗಾಯನದಲ್ಲಿ ತಮ್ಮ ಅಪರೂಪದ ಕಂಠಸಿರಿಯ ಮೂಲಕ ಪ್ರಸಿದ್ದರಾಗಿದ್ದ ಜಾನಕಿ ಅಮ್ಮನ ಅಗಲಿಕೆಯೊಂದಿಗೆ ಭಾರತೀಯ ಚಿತ್ರಸಂಗೀತದ ಸುವರ್ಣ ಅಧ್ಯಾಯವೊಂದು(Golden Chapter) ಕೊನೆಗೊಂಡಂತಾಗಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ(Mysore Apollo Hospital) ದಾಖಲಾಗಿದ್ದರು. 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದ ಸಿನ್ಹಾ ಜಾನಕಿ, ಬಾಲ್ಯದಲ್ಲಿಯೇ ಸಂಗೀತದತ್ತ ಅಪಾರ ಆಸಕ್ತಿ ಬೆಳೆಸಿಕೊಂಡರು. 1938ರ ತಮ್ಮ ಮೂರನೆಯ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. 1957ರಲ್ಲಿ ಹಿನ್ನೆಲೆ ಗಾಯನ ಆರಂಭಿಸಿದ ಅವರು, ಕನ್ನಡ(Kannada), ತಮಿಳು(Tamilu), ತೆಲುಗು(Telugu), ಮಲಯಾಳಂ(malalalam), ಹಿಂದಿ(Hindi) ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗುವ ಮೂಲಕ ಭಾರತೀಯ ಸಂಗೀತ ಇತಿಹಾಸದಲ್ಲೇ ಅಪರೂಪದ ದಾಖಲೆ ನಿರ್ಮಿಸಿದರು. ಅವರ ಕಂಠದ ಭಾವಪೂರ್ಣತೆ, ಸ್ಪಷ್ಟ ಉಚ್ಚಾರಣೆ ಮತ್ತು ಪಾತ್ರಕ್ಕೆ ತಕ್ಕಂತೆ ಧ್ವನಿಯನ್ನು ರೂಪಿಸುವ ಸಾಮರ್ಥ್ಯ ಅವರಿಗೆ ಅನನ್ಯ ಸ್ಥಾನ ತಂದುಕೊಟ್ಟಿತು.
ಹಳ್ಳಿಯ ಸೊಗಡಿನ ಹಾಡುಗಳಿಂದ ಹಿಡಿದು ಶಾಸ್ತ್ರೀಯ, ಪಾಶ್ಚಾತ್ಯ ಶೈಲಿಯ(Western Style) ಹೀಗೆ ಎಲ್ಲಾ ಪ್ರಕಾರದ ಗೀತೆಗಳಿಗೂ ಜಾನಕಿ ಅವರು ಜೀವ ತುಂಬಿದ್ದರು. ಕನ್ನಡ ಚಿತ್ರರಂಗದಲ್ಲಿ ಹಲವು ತಲೆಮಾರಿನ ನಟರ ಚಿತ್ರಗಳಿಗೆ ಅವರು ಹಾಡಿದ ಅನೇಕ ಗೀತೆಗಳು ಇಂದಿಗೂ ಸಂಗೀತಪ್ರಿಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ. ಪ್ರೇಮಗೀತೆ(LoveSong), ಭಕ್ತಿಗೀತೆ(Devotion Song), ಜಾನಪದ(Folk Song), ವಿಷಾದಗೀತೆ ಅಥವಾ ತಾಯಿಯ ಮಮತೆಯನ್ನು ಬಿಂಬಿಸುವ ಹಾಡು-ಯಾವುದೇ ಪ್ರಕಾರವಾಗಲಿ, ಜಾನಕಿ ಅವರ ಧ್ವನಿ ಅದಕ್ಕೆ ಜೀವ ತುಂಬುತ್ತಿತ್ತು.
ಅವರ ಅಪೂರ್ವ ಗಾಯನ ಸಿರಿಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ(National Film Award) ಪ್ರಶಸ್ತಿಗಳು ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ 33ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದರು. ಕರ್ನಾಟಕ ಸರ್ಕಾರದ ರಾಜೋತ್ಸವ ಪ್ರಶಸ್ತಿ(Rajyotsav Award) ಸೇರಿದಂತೆ ಅನೇಕ ಗೌರವಗಳು ಅವರಿಗೆ ಪ್ರಾಪ್ತವಾಗಿದ್ದವು. 2013ರಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಪದ್ಮಭೂಷಣ ಪ್ರಶಸ್ತಿಯನ್ನು(Padmabhushana Award) ಗೌರವಪೂರ್ವಕವಾಗಿ ನಿರಾಕರಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಗಾನಕೋಗಿಲೆಯ ಕಂಠ ಮೌನವಾಗಿದೆ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಪೀಳಿಗೆಗಳಿಗೂ ಅವರ ನೆನಪನ್ನು ಚಿರಸ್ಥಾಯಿಯಾಗಿಸಲಿದೆ. ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಅಪರೂಪದ ಮೇರು ಪ್ರತಿಭೆಯನ್ನು ಕಳೆದುಕೊಂಡಂತಾಗಿದ್ದು ದೇಶದ ಸಂಗೀತ ಪ್ರಿಯರು, ನಟರು ಜಾನಕಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
