ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಬೈಂದೂರು ತಾಲೂಕಿನ ಅರೆಶಿರೂರಿನಲ್ಲಿ ಇರುವ ಕೊಲ್ಲೂರು(Kolluru) ವ್ಯವಸಾಯ ಸೇವಾ ಸಹಕಾರಿ ಸಂಘ ಶಾಖೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿದ(Theft attempt) ಘಟನೆ ನಡೆದಿದೆ.
ಹೊರಗಡೆ ಗೋಡೆಗೆ ಅಳವಡಿಸಲಾಗಿದ್ದ ಬಲ್ಬ್ ಅನ್ನು ಕಿತ್ತು ಕಿಟಕಿಯ ಗ್ರಿಲ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿ ಟಿವಿ ಲೈವ್ ನಲ್ಲಿ ವೀಕ್ಷಣೆ ಮಾಡುತ್ತಿದ್ದ ಸಿಬ್ಬಂದಿಯಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು.
ಬೆಳಿಗ್ಗೆ 2:47 ರ ಸುಮಾರಿಗೆ ಗ್ಯಾಸ್ ಕಟ್ಟರ್ ಮೂಲಕ ಗ್ರೀಲ್ ಕಿಟಕಿಯನ್ನ ಕಳ್ಳರು ಕತ್ತರಿಸಲು ಯತ್ನಿಸುತ್ತಿದ್ದರು. ಮಾಹಿತಿ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಸವಿತ್ರತೇಜ್ ಹಾಗೂ ಠಾಣಾಧಿಕಾರಿ ತಿಮ್ಮೇಶ್ ಮತ್ತು ಸಿಬ್ಬಂದಿಗಳು ಹದಿನೈದು ನಿಮಿಷದೊಳಗೆ ಸ್ಥಳಕ್ಕಾಗಮಿಸುವಾಗಲೇ ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದಾರೆ.
ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಬಾರೀ ಕಳ್ಳತನವೊಂದು ತಪ್ಪಿದೆ. ಬೈಂದೂರು ಪೊಲೀಸ್ ಠಾಣಾ (Byndooru Police Station) ವ್ಯಾಪ್ತಿಯ ಘಟನೆ ನಡೆದಿದೆ.
ಇದನ್ನು ಓದಿ : ಸಾಲದ ಹಣಕ್ಕೆ ಕಾಲಿಗೆ ಸರಪಳಿ ಕಟ್ಟಿದ ಬೇಕೂಪ.
ಹಳೆ ಪ್ರಕರಣವೊಂದರಲ್ಲಿ ಪರಿಹಾರ ನೀಡದಕ್ಕೆ ಜಿಲ್ಲಾಧಿಕಾರಿ ಕಾರು ಜಪ್ತಿ.