ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (sirsi): ಅಲ್ಲಿ ಜಗಳ ನಡಿತಾ ಇದೆ ನಿಮ್ಮ ಬಂಗಾರ(Gold) ಸರಿಯಾಗಿ ಇಟ್ಟುಕೊಳ್ಳಿ ಎಂದು ಮಹಿಳೆಯೊರ್ವಳನ್ನು ಯಾಮಾರಿಸಿ ಅವಳಿಂದ ಬಂಗಾರ ಪಡೆದು ಬಟ್ಟೆಯೊಂದರಲ್ಲಿ ನಕಲಿ ಬಂಗಾರ(Duplicate Gold) ಕಟ್ಟಿಕೊಟ್ಟು ಪರಾರಿಯಾಗಿದ್ದ ಆರೋಪಿಯನ್ನ ಶಿರಸಿ ಪೊಲೀಸರು(Sirsi Police) ಬಂಧಿಸಿದ್ದಾರೆ.
15 ವರ್ಷಗಳಿಂದ ಪೋಲಿಸರ ಕಣ್ತಪ್ಪಿಸಿಕೊಂಡಿದ್ದ ಅಂತರ ರಾಜ್ಯ ಆರೋಪಿ ಕಲಬುರಗಿಯ ಯುಸೂಫ್ ಖಾನ ಯಾನೆ ಖಾನ ಬಹೂದೂರ ಎಂಬಾತನನ್ನು ಶಿರಸಿ ನಗರ ಠಾಣೆ (Sirsi Town Station) ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲೇ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ತಪ್ಪಿಸಿಕೊಂಡಿದ್ದನು. ಈ ಮೋಸ್ಟ್ ವಾಂಟೆಡ್ ಆರೋಪಿಯ ಮೇಲೆ ರಾಜ್ಯದ ವಿವಿದೆಡೆ ಒಟ್ಟೂ 24 ಪ್ರಕರಣಗಳು ದಾಖಲಾಗಿವೆ.
ಡಿವಾಯಸ್ಪಿ ಗಣೇಶ ಕೆ ಎಲ್ ಹಾಗು ಸಿಪಿಆಯ್ ಶಶಿಕಾಂತ ವರ್ಮಾ ಮಾರ್ಗದರ್ಶನ ಪಿಎಸ್ಆಯ್ ಗಳಾದ ರಾಜಕುಮಾರ ಉಕ್ಕಲಿ ಮತ್ತು ರತ್ನಾ ಕುರಿ ಇವರ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಮಹಾಂತೇಶ ಬಾರಕೆರ್, ಅಶೋಕ ನಾಯ್ಕ, ಸಿಂದೀಪ ನಿಂಬಾಯಿ, ರಾಮಯ್ಯ ಪೂಜಾರಿ ಇತರರು ಪಾಲ್ಗೊಂಡಿದ್ದರು.
ಇದನ್ನು ಓದಿ : ಮಳೆಯಿಂದ ರಸ್ತೆ ಬದಿ ಕುಸಿತ. ಖೈರೆ ಕ್ರಾಸ್ ನಿಂದ ಕತಗಾಲವರೆಗೆ ಮಾರ್ಗ ಬಂದ್.