ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಗೋಕರ್ಣ(Gokarn) : ಪ್ರವಾಸಕ್ಕೆ ಬಂದಿದ್ದ ಇಬ್ಬರು ಮೆಡಿಕಲ್ ವಿದ್ಯಾರ್ಥಿನಿಯರು(Medical Student) ಸಾವನ್ನಪ್ಪಿದ ಘಟನೆ ನಡೆದಿದೆ.

ಗೋಕರ್ಣದ ಜಟಾಯು ತೀರ್ಥದ(Gokarn Jatayu Teertha) ಬಳಿ ಈ ಘಟನೆ ಸಂಭವಿಸಿದೆ. 23 ವರ್ಷದ ಹಿಂದುಜಾ ಮತ್ತು  ಕನಿಮೂಳಿ ಮೃತ ವಿದ್ಯಾರ್ಥಿನಿಯರು.

23 ವಿದ್ಯಾರ್ಥಿಗಳ ತಂಡ ಗುರುವಾರ ದಾಂಡೇಲಿ ಪ್ರವಾಸ ಮುಗಿಸಿ ಗೋಕರ್ಣಕ್ಕೆ ಬಂದಿದ್ದರು. ಸಮುದ್ರ ಅಂಚಿನ  ಬಂಡೆ ಮೇಲೆ  ನಾಲ್ವರು ಯುವತಿಯರು ಕುಳಿತಿದ್ದರು. ಕಡಲ ಅಲೆ  ಬಡಿದು ಇಬ್ಬರು ಸಮುದ್ರಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು  ಗಾಯಗೊಂಡಿದ್ದಾರೆ.

ತಮಿಳನಾಡು(Tamilunadu) ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ(Medical Student) ಕೊನೆಯ ವರ್ಷದ ಪರೀಕ್ಷೆ ಮುಗಿಸಿ   ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು.

ಘಟನೆ ನಡೆದ ಸುದ್ದಿ ತಿಳಿದ ತಕ್ಷಣವೇ ಪಿಐ ಶ್ರೀಧರ್ ಎಸ್.ಆರ್ ನೇತೃತ್ವದಲ್ಲಿ ಇಬ್ಬರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ದೋಣಿಯ ಮೂಲಕ ತೆರಳಿ ಮೃತದೇಹ ಹೊರ ತರಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ(Gokarn Police Station) ಪ್ರಕರಣ  ದಾಖಲಾಗಿದೆ.

ಇದನ್ನು ಓದಿ : ಪಾಕಿಸ್ಥಾನಿ ನಾಗರಿಕರೇ ದೇಶ ಬಿಟ್ಟು ತೊಲಗಿ. ಖಡಕ್ ಸೂಚನೆ ಕೊಟ್ಟ ಕೇಂದ್ರ ಸರ್ಕಾರ.

ಕಾರವಾರ ಹತ್ಯೆ ಪ್ರಕರಣ. ನಿರ್ಲಕ್ಷ್ಯ ವಹಿಸಿದ್ದಕ್ಕೆ ನಾಲ್ವರು ಪೊಲೀಸರ ಅಮಾನತು?