ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಗುತ್ತಿಗೆದಾರ,  ಕಾಂಗ್ರೆಸ್ ಧುರೀಣ, ಕಾರವಾರ ಶಾಸಕ ಪರಮ ಆಪ್ತ   ವಿಜಯ್ ದೇಸಾಯಿ  ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಮನೆಯಲ್ಲಿರುವಾಗ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇಂದು ಅವರ ಅಂತ್ಯ ಸಂಸ್ಕಾರ ಕಾರ್ಯ ನಡೆಯಲಿದೆ.

ಶಾಸಕ ಸತೀಶ ಸೈಲ್ ಅವರ ಆತ್ಮೀಯ ಬಳಗದಲ್ಲಿದ್ದು ವಿಜಯ ದೇಸಾಯಿ ಹಲವು ವರ್ಷಗಳಿಂದ ಜೊತೆಯಾಗಿದ್ದರು. ಸೈಲ್ ಅವರ ರಾಜಕೀಯ ಚಟುವಟಿಕೆಯಲ್ಲಿ  ವಿಜಯ ದೇಸಾಯಿ ಅವರು ಬಹು ಮುಖ್ಯ ಪಾತ್ರ ವಹಿಸುತ್ತಿದ್ದರು.   ಕಾರವಾರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೂ   ಸಾಕಷ್ಟು ಸಹಾಯ ಮಾಡಿದ್ದರು.

ವಿಜಯ್ ಸಾವಿಗೆ ಶಾಸಕ ಸತೀಶ್ ಸೈಲ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಇನ್ನೂ ಐದು ವರ್ಷದವರೆಗೆ ಜಾಗೃತೆಯಿಂದಿರಿ. ಕೋಡಿಶ್ರೀ ಭವಿಷ್ಯ.

ಭಟ್ಕಳ ಪೊಲೀಸರ ಕಾರ್ಯಾಚರಣೆ, ಮೂವರ ಬಂಧನ.