ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಖ್ಯಾತ ಈಜು ಪಟು(Famous Swimmer), ಚಿತ್ರ ಕಲಾವಿದ(Artist) ನೌಕಾನೆಲೆ ಉದ್ಯೋಗಿ ಮೋಹನ‌ ಪಿ ತಾಂಡೇಲ(57) ನಿಧನರಾಗಿದ್ದಾರೆ.

ಕಾರವಾರ ತಾಲೂಕಿನ ಚಿತ್ತಾಕುಲ ಸೀಬರ್ಡ್ ಕಾಲೋನಿಯ(Chittakul Seabird Colony) ನಿವಾಸಿಯಾಗಿರುವ ಮೋಹನ ತಾಂಡೇಲ ಅವರು ಬುಧವಾರದಂದು ಹೋಳಿ ಹಬ್ಬದ(Holi Festival) ಸಮುದ್ರ ಸ್ನಾನ ಮಾಡಿ ಮನೆಗೆ ವಾಪಾಸ್ಸಾಗಿದ್ದರು. ಮಧ್ಯಾಹ್ನ ಮನೆಯಲ್ಲಿರುವಾಗ ಅಸ್ವಸ್ಥರಾಗಿದ್ದ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ಹೃದಯಾಘಾತದಿಂದ ಮೃತರಾಗಿದ್ದಾಗಿ ವೈದ್ಯರು‌ ತಿಳಿಸಿದ್ದಾರೆ.

ಮೋಹನ ತಾಂಡೇಲ್ ಅವರು  ಸೀಬರ್ಡ್ ನೌಕಾನೆಲೆಯಲ್ಲಿ ಸಾರಂಗ ಆಪ್ ಲಾಸ್ಕರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. 1988 ರ ಸಂದರ್ಭದಲ್ಲಿ ಉತ್ತಮ ಈಜು ಪಟುವಾಗಿ ಜಿಲ್ಲೆಯಲ್ಲಿ ಹೊರ ಹೊಮ್ಮಿದ್ದರು. ಅವರ ಪ್ರಿ ಸ್ಟೈಲ್ ಸ್ವಿಮ್ಮಿಂಗ್(Freestyle Swimming) ವಿಭಾಗದಲ್ಲಿ ಮುಂಚೂಣಿಯಲ್ಲಿದ್ದರು. ಅಲ್ಲದೇ ಉತ್ತಮ ಚಿತ್ರ ಕಲಾವಿದರಾಗಿದ್ದ ಮೋಹನ ಅವರು ಕಾರವಾರದಲ್ಲಿ ನಡೆಯುವ ಸ್ಪರ್ಧೆಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಉತ್ತಮ ಯೋಗ ಪಟುವಾಗಿದ್ದ ಮೋಹನ ಅವರು ನೀರಿನಲ್ಲಿಯೂ ಕೂಡ ಅನೇಕ ಯೋಗ ಕಸರತ್ತನ್ನು ಸಲೀಸಾಗಿ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದರು. ಅಲ್ಲದೇ ಸದ್ಗುರು ನಿತ್ಯಾನಂದ ಸ್ವಾಮಿಗಳು, ಮಾತಾ ಅಮೃತಾನಂದಮಯಿ, ಸಾಯಿ ಬಾಬಾ ಅವರ ಪರಮ ಭಕ್ತರಾಗಿದ್ದ ಮೋಹನ ಅವರು ಅಧ್ಯಾತ್ಮಿಕದ ಕಡೆ ಹೆಚ್ಚಿನ‌ ಒಲವು ಇಟ್ಟುಕೊಂಡಿದ್ದರು. ಆ ಕಾರಣದಿಂದಲೇ ಅವರಿಗೆ ಮಹಾರಾಷ್ಟ್ರ ಭಾಗದಲ್ಲಿ ಅಪಾರ ಸ್ನೇಹಿತರಿದ್ದರು.

ಅವರ ಅಕಾಲಿಕ ನಿಧನದಿಂದಾಗಿ ಅಪಾರ ಸ್ನೇಹಿತ ಬಳಗದವರು, ಸಂಬಂಧಿಕರು, ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಅವರು ಪತ್ನಿ ಸುನೀತಾ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಕುಟುಂಬದವರನ್ನ ಅಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು  ಸಮಸ್ತ ಮೀನುಗಾರ ಸಮಾಜ ಪ್ರಾರ್ಥಿಸಿದೆ.

ಇದನ್ನು ಓದಿ : ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ. ಓರ್ವ ಸಾವು

ಮಧ್ಯಪ್ರಾಚ್ಯ ಯುದ್ಧ ಭೀತಿ: ಭಟ್ಕಳದಲ್ಲಿ ಪೆಟ್ರೋಲ್ ಡಿಸೇಲ್ ಗೆ ಮುಗಿಬಿದ್ದ ಜನ