ಅಂಕೋಲಾ(ANKOLA) : ತಾಲೂಕಿನ ಶಿರೂರು ಗುಡ್ಡಕುಸಿತ(SHIRURU LANDSLIDE) ದುರಂತದಲ್ಲಿ ನಾಪತ್ತೆಯಾದವರ ಮತ್ತು ವಾಹನಗಳ ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ.

ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ನದಿಯಲ್ಲಿ ವಾಹನಗಳ ಹಲವು ವಸ್ತುಗಳು ಪತ್ತೆಯಾಗಿವೆ. ಬೆಳಗಿನ ವೇಳೆ  ವಿದ್ಯುತ್ ಟವರ್(POWER TOWER) ನುಜ್ಜು ಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾದರೆ,  ಮಧ್ಯಾಹ್ನದ ಸಮಯದಲ್ಲಿ  ವಾಹನವೊಂದರ ಹಿಂಬದಿಯ ನಾಲ್ಕು ಚಕ್ರವನ್ನ ಡ್ರೆಜಿಂಗ್ ಯಂತ್ರ ಮೇಲಕೆತ್ತಿದೆ. ಅದರ ಜೊತೆಗೆ ಸಿಕ್ಕಂತಹ ಬಟ್ಟೆಗಳು, ಯಂತ್ರದ ಬಿಡಿ ಭಾಗಗಳನ್ನು  ಕೇರಳದ ಟ್ರಕ್(KERAL TRUCK) ಮಾಲೀಕನಿಗೆ ತೋರಿಸಿ ಗುರುತಿಸುವಂತೆ ತಿಳಿಸಿದ್ದರಿಂದ ತಮ್ಮ ವಾಹನದ ವಸ್ತುವಲ್ಲವೆಂದು ಹೇಳಿದ್ದಾರೆ. ಅದೇ ರೀತಿ ಅರ್ಜುನ್ ಸಹೋದರಿಗೂ ಡ್ರೆಜಿಂಗ್ ಯಂತ್ರದ ಬಳಿ ಕರೆದೋಯ್ದು  ಸಿಕ್ಕಂತಹ ವಸ್ತುಗಳನ್ನು ಗುರುತಿಸುವಂತೆ ತೋರಿಸಲಾಗಿದೆ.

ಈ ಮಧ್ಯೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ (MAJOR INDRABALAN) ಅವರು ಶಿರೂರು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದರು. ಕಾರ್ಯಾಚರಣೆ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಗುಡ್ಡಕುಸಿತ ಸಂದರ್ಭದಲ್ಲಿ ತಾವು ಗಂಗಾವಳಿ ನದಿಯಲ್ಲಿ 4 ಸ್ಥಳ ಗುರುತಿಸಿದ್ದೇವು. ಗುರುತಿಸಿದ ನಾಲ್ಕು ಸ್ಥಳಗಳಲ್ಲಿ ಎರಡರಲ್ಲಿ ಡ್ರೆಜ್ಜರ್ ಯಂತ್ರಗಳಿಂದ ಶೋಧಿಸಲಾಗುತ್ತಿದೆ. ಒಂದು ಮತ್ತು ಎರಡನೇ ಪಾಯಿಂಟ್‌ನಲ್ಲಿ ಲಾರಿಯ ಅವಶೇಷಗಳು ಸಿಕ್ಕಿದೆ. ಇನ್ನೂ ನಾಲ್ಕನೇ ಪಾಯಿಂಟ್‌ನಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಟ್ರಕ್(BHARAT BENZ TRUCK) ಇದೆ. ಸುಮಾರು ನಾಲ್ಕೈದು ಅಡಿ ಆಳದಲ್ಲಿ ಟ್ರಕ್ ಇರುವುದು ಸ್ಕ್ಯಾನಿಂಗ್‌ನಲ್ಲಿ ತೋರಿಸಿದೆ. ನಾಳೆ ನಾಲ್ಕನೇ ಪಾಯಿಂಟ್‌ ಸ್ಥಳ ಗುರುತಿಸಿ ಡ್ರೆಜ್ಜರ್‌ ಮೂಲಕ ಕಾರ್ಯಾಚರಣೆ ನಡೆಸುತ್ತೇವೆ ಎಂದಿದ್ದಾರೆ.

ಸ್ಕ್ಯಾನಿಂಗ್ ಗುರುತಿಸಿದ ಸ್ಥಳದಲ್ಲಿ ಅವಶೇಷ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ. ಮುಂದೆ ಕಣ್ಮರೆಯಾದ ವಾಹನಗಳು, ದೇಹಗಳು ಸಿಗಬಹುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ,: ಗೋಕರ್ಣ ಪೊಲೀಸರಿಂದ ಅಂತಾರಾಜ್ಯ ವ್ಯಕ್ತಿ ಬಂಧನ

ನಗರದ ಗುಡ್ಡಳ್ಳಿಗೆ ಗುಡ್ ಹೇಳೋರು ಯಾರು

ಕಾರವಾರದಲ್ಲಿ ಅಗರ್ಭ ಶ್ರೀಮಂತನ ಬರ್ಬರ ಹತ್ಯೆ