ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋಕರ್ಣ(Gokarn) : ಯುದ್ದದಲ್ಲಿ ಮಡಿದ ವಿದೇಶಿ ಯೋಧನಿಗೆ  ಮೋಕ್ಷ ಕಾರ್ಯ ನೆರವೇರಿಸಿ  ನಾರಾಯಣ ಬಲಿ ಸಂಬಂಧ ಗೋಕರ್ಣದಲ್ಲಿ ಪಿಂಡ ಪ್ರಧಾನ ಮಾಡಿದ ಪದ್ದತಿ ನಡೆದಿದೆ.

ರಷ್ಯಾ ಮೂಲದ ಸರ್ಗೀ  ಗ್ರೆಬ್ಲೆವಿಸ್ಕಿ (Sergey Grablevski ) ಎಂಬಾತನೇ  ರಷ್ಯಾ(Russai) ಮತ್ತು ಯುಕ್ರೇನ್(Ukraine) ಯುದ್ಧದಲ್ಲಿ ಮಡಿದಿದ್ದ.    ಅಪ್ಪಟ ಶಿವಭಕ್ತ, ಸನಾತನ ಹಿಂದೂ ಧರ್ಮದಲ್ಲಿ ಅಪಾರ ಶೃದ್ಧೆ, ನಂಬಿಕೆಯುಳ್ಳ, ಗೋಕರ್ಣವನ್ನು ಅಗಾಧವಾಗಿ ಪ್ರೀತಿಸುತ್ತಿದ್ದವನಾಗಿದ್ದ.  ಎಪ್ರಿಲ್ 26 ರಂದು ಯುದ್ದದಲ್ಲಿ  ಮೃತಪಟ್ಟಿದ್ದ ಸರ್ಗೀ ಕೆಲವು ದಿವಸಗಳ ನಂತರ ಇವರ ಡಿ.ಎನ್.ಎ. ವರದಿ ಆಧಾರದ ಮೇಲೆ ರಷ್ಯಾ ಮಿಲಿಟರಿ ಅಧಿಕೃತವಾಗಿ  ಮೃತಪಟ್ಟಿರುವ  ಘೋಷಣೆ ಮಾಡಿತ್ತು.

       ಮೂಲತಃ ರಷ್ಯಾದ ಮಾಸ್ಕೋದವರಾದ ಸರ್ಗೀ  ಮೊದಲು ಸೇನೆಯಲ್ಲಿ ಸೈನಿಕರಾಗಿದ್ದರು. ನಂತರ ಸೈನ್ಯ ಬಿಟ್ಟು ದೇಶ ಸುತ್ತಲು ಪ್ರಾರಂಭಿಸಿದರು. ಅದೇ ರೀತಿ 20 ವರ್ಷಗಳ   ಹಿಂದೆ ಭಾರತಕ್ಕೆ  ಬಂದಿದ್ದರು.  ಸನಾತನ ಹಿಂದೂ ಧರ್ಮದಲ್ಲಿ ಆಕರ್ಷಿತರಾಗಿ, ವಾರಣಾಸಿಯಲ್ಲಿ ಸಂಸ್ಕ್ರತ, ವೇದ ಮಂತ್ರಗಳನ್ನು ಸ್ವಲ್ಪ ಮಟ್ಟಿಗೆ ಕಲಿತರು. ತಾವೇ ಸ್ವತಃ ಹೋಮ ಹವನಗಳನ್ನು ಮಾಡಲು ಪ್ರಾರಂಭಿಸಿ ಸರ್ಗೀ ಬಾಬಾ ಆಗಿ ಬಿಟ್ಟರು. ಸಾವಿರಕ್ಕೂ ಹೆಚ್ಚು ಶಿಷ್ಯರನ್ನು ಹೊಂದಿರುವ ಸರ್ಗೀ ಬಾಬಾ ಕಳೆದ 18 ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿದ್ದರು.

      ಗೋಕರ್ಣದ ಬ್ರಹ್ಮಕಾನ (Gokarn Brahmakana) ಬಳಿ  ಉದ್ಯಮಿ ಗೋವಿಂದ ಗೌಡ ಎಂಬುವವರು ತಮ್ಮ ಸ್ವಂತ ಜಾಗದಲ್ಲಿ ಮಾಯಾ ಆಶ್ರಮ(Maya Aashrama) ಎಂಬ ಆಶ್ರಮವನ್ನು ನಿರ್ಮಿಸಿಕೊಟ್ಟಿದ್ದರು. ತಮ್ಮ ಶಿಷ್ಯರ ಜೊತೆಗೆ ಮೃತ್ಯುಂಜಯ, ನವಗೃಹ ಮುಂತಾದ ಹೋಮ ಹವನಗಳನ್ನು ನಡೆಸುತ್ತಿದ್ದರು.  ಕಳೆದ ವರ್ಷ ರಷ್ಯಾ ದೇಶಕ್ಕೆ ತಿರುಗಿ ಹೋಗುವಾಗ ತಾಯಿ ಮತ್ತು ತಾಯ್ನಾಡನ್ನು ಯಾವಾಗಲೂ ಬಿಟ್ಟುಕೊಡಬಾರದು. ಅವರನ್ನು ರಕ್ಷಣೆ ಮಾಡುವುದು ನನ್ನ ಮೊದಲ ಆದ್ಯತೆ. ಅದೇ ಕಾರಣದಿಂದ ನಾನು ಯುದ್ದದಲ್ಲಿ ಪಾಲ್ಗೊಳ್ಳುತ್ತೇನೆ  ಎಂದು ಹೊರಟು ಹೋಗಿದ್ದರು.

ಇದೀಗ  ಅವರ ಶಿಷ್ಯರೆಲ್ಲಾ ಸೇರಿ ಎಲಿನ್ ಎಂಬುವವರ ನೇತೃತ್ವದಲ್ಲಿ ಅವರ ಮೋಕ್ಷಕ್ಕಾಗಿ ಗೋಕರ್ಣದಲ್ಲಿ ಮೋಕ್ಷ ಕಾರ್ಯಗಳನ್ನು ಮಾಡಿದ್ದಾರೆ. ಅವರ ನಿಧನಕ್ಕೆ ಶಿಷ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಇದನ್ನು ಓದಿ : ಹಡಗಿನ ರೋಪ್ ತುಂಡಾಗಿ ಜಾಲಿ ಕಡಲತೀರಕ್ಕೆ ಬಂದ ಬಾರ್ಜ್.

ಜೆಜೆಎಂ ಕಾಮಗಾರಿಯಲ್ಲಿ ಸಿಲುಕಿದ ಸರ್ಕಾರಿ ಬಸ್

ದೇವಿಮನೆ ಘಟ್ಟದಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧ.