ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉಡುಪಿ(Udupi) : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ(Udupi Srikrishna Math) ನಡೆಯುತ್ತಿರುವ ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ(Andrapradesha DCM) ಹಾಗೂ ಸಿನಿ ನಟ ಪವನ್ ಕಲ್ಯಾಣ್(Actor Pawankalyan) ಆಗಮಿಸಲಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠದ(Sri Puttige Math) ಆಶ್ರಯದಲ್ಲಿ ಆಯೋಜನೆಯಾಗಿರುವ ಈ ಗೀತೋತ್ಸವದ ಅಂತಿಮ ಕಾರ್ಯಕ್ರಮ(Geetotsava Final Programme) ಡಿಸೆಂಬರ್ 7 ರ ಭಾನುವಾರ ಸಂಜೆ 4 ಗಂಟೆಗೆ ನಡೆಯಲಿದೆ.
ಈಗಾಗಲೇ ನವೆಂಬರ್ 8 ರಂದು ಪೇಜಾವರ ಶ್ರೀಗಳಿಂದ(Pejavara Shri) ಗೀತೋತ್ಸವಕ್ಕೆ ಉದ್ಘಾಟನೆಯಾಗಿತ್ತು. ಲಕ್ಷ ಕಂಠ ಗೀತಪಾರಾಯಣದಲ್ಲಿ(Laksha kanta Geetaparayana) ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಭಾಗವಹಿಸಿದ್ದರು. ಹಲವು ದಿನಗಳಿಂದ ಭಕ್ತಿ–ಸಂಸ್ಕೃತಿ(Bhakti-Culture) ಸಂಭ್ರಮದಿಂದ ಕಂಗೊಳಿಸುತ್ತಿರುವ ಗೀತೋತ್ಸವಕ್ಕೆ ಭಾನುವಾರ ಪವನ್ ಕಲ್ಯಾಣ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತರಲಿದೆ.
ಗೀತೋತ್ಸವ ಸಮಾರೋಪದಲ್ಲಿ ‘ಆಂಧ್ರ ಪವರ್ ಸ್ಟಾರ್’ (Andra Powerstar) ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿದೆ.
ಇದನ್ನು ಓದಿ : ಮನೆಯಲ್ಲಿ 60 ಕೆಜಿ ಶ್ರೀಗಂಧ. ಆರೋಪಿ ಕಬ್ಬಿನ ಗದ್ದೆಯಲ್ಲಿ ಪರಾರಿ.
ಜಾಗತಿಕ ಹವಾ ಸೃಷ್ಟಿಸಿದ ’45’ ಚಿತ್ರದ ‘AFRO ಟಪಾಂಗ್’ಹಾಡು. ಭಾರತದಲ್ಲಿ ಟಾಪ್ ಟ್ರೆಂಡಿಂಗ್ ! ಸದ್ಯದಲ್ಲೇ ಟ್ರೇಲರ್.
