ಅಂಕೋಲಾ(ANKOLA) : ಜುಲೈ 16 ರಂದು ಸುರಿದ ಧಾರಾಕಾರ ಮಳೆಗೆ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಪರಿಣಾಮ ಹೊಳೆಯ ಪಕ್ಕದ ಉಳುವರೆ ಗ್ರಾಮಕ್ಕೆ ಒಮ್ಮೇಲೆ ನೀರು ನುಗ್ಗಿ ಹಲವು ಮನೆಗಳು ಧರಶಾಹಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ(DHARMASTHALA) ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (dr. VEERENDRA HEGGADE) ಭೇಟಿ ನೀಡಿ ಸಾಂತ್ವನ ಹೇಳಿದರು.

ಗ್ರಾಮದ 7 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು.  ಗ್ರಾಮಕ್ಕೆ ಭೇಟಿ ನೀಡಿದ ಪೂಜ್ಯರು ಸಂತ್ರಸ್ತರಿಗೆ ಸಾಂತ್ವನ ನೀಡಿದ್ದಲ್ಲದೇ ಅವರ ಸಮಸ್ಯೆಯನ್ನು ಆಲಿಸಿದರು. ಸಮಸ್ಯೆಯ ತೀವೃತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಧರ್ಮಸ್ಥಳದಿಂದ ನೆರವು ನೀಡಲಾಗಿದೆ. ಇನ್ನು ಹೆಚ್ಚಿನ ವರದಿಯನ್ನು ಪರಿಶೀಲಿಸಿ ಸಂತ್ರಸ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು. ಸರಕಾರ ನೆರವು ನೀಡುವುದಕ್ಕಿಂತ ಮೊದಲೇ ನಮಗೆ ಚಾಪೆ ಹಾಗೂ ಬೆಡ್‌ಶೀಟ್‌ ನ್ನು ಪ್ರವಾಹ ಆದ ದಿನವೇ ನಮಗೆ ತಲುಪಿಸಿದ್ದಿರಿ ಎಂದು ಸದಸ್ಯರು ಪೂಜ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಕುಮಟಾ ಹೊನ್ನಾವರ ತಾಲೂಕಿನ ಶಾಸಕ ದಿನಕರ ಶೆಟ್ಟಿ,  ಜನಜಾಗೃತಿ ಅಧ್ಯಕ್ಷ ಮಹೇಶ ನಾಯ್ಕ, ಜನಜಾಗೃತಿ ಸದಸ್ಯ ಯೋಗಾನಂಧ ಗಾಂಧಿ, ವಾಸುದೇವ ನಾಯ್ಕ, ಮಹಾಲಸಾ ದೇವಸ್ಥಾನದ ಧರ್ಮದರ್ಶಿ ಸುನೀಲ್‌ ಪೈ ರವರು, ಉಡುಪಿ ಕರಾವಳಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಗ್ರಾ.ಪಂ ಎಲ್ಲಾ ಸದಸ್ಯರು, ಉತ್ತರಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು , ಶೌರ್ಯ ವಿಪತ್ತು ಸದಸ್ಯರು, ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರು, ಕುಮಟಾ, ಅಂಕೋಲಾ, ಕಾರವಾರ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಹಿರೇಗುತ್ತಿ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.