ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 101ನೇ ಜನ್ಮ ದಿನಾಚರಣೆ ಅಂಗವಾಗಿಉತ್ತರಕನ್ನಡಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ ಫಿಟ್ ಇಂಡಿಯಾ ಸಂಘಟನೆಯ ಸಹಯೋಗದಲ್ಲಿ “ಯುನಿಟಿ ರನ್ ಎಂಡ್ ರೈಡ್”(Unity Run & Ride) ಕಾರ್ಯಕ್ರಮ ಸಂಭೃಮದಿಂದ ನಡೆಯಿತು.
ನಗರದ ಮಾಲಾದೇವಿ ಮೈದಾನದಲ್ಲಿ(Maladevi Ground) ಭಾನುವಾರ ಬೆಳಿಗ್ಗೆ ಕಾರ್ಯಕ್ರಮವನ್ನು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ(Sri Satyasai Seva Organization) ರಾಜ್ಯಾಧ್ಯಕ್ಷರಾದ ಎಂ ಪದ್ಮನಾಭ ಪೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಯಿಯ ಸಂದೇಶವನ್ನ ಜಗತ್ತಿನಲ್ಲೆಡೆ ಪಸರಿಸುತ್ತಿದ್ದೇವೆ. ಲವ್ ಆಲ್ ಸರ್ವ್ ಆಲ್(Love All Serve All), ಹೆಲ್ಪ್ ಯುವರ್ ಹರ್ಟ್ ನೆವರ್(Help Your Hurt Never) ಈ ಮಹಾಮಂತ್ರ ತಿಳಿಸುವ ಸಲುವಾಗಿ ಇಂಥ ಕಾರ್ಯಕ್ರಮವನ್ನ ದೇಶದ 60 ಪಟ್ಟಣಗಳಲ್ಲಿ ನಡೆಸುತ್ತಿದ್ದೇವೆ. ಇಲ್ಲಿ ಸೋಲು ಗೆಲುವು ಎಂಬುದಿಲ್ಲ. ದೇವರು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಮಾತನಾಡಿ, ಇಂದಿನ ದಿನದಲ್ಲಿ ಎಲ್ಲರಿಗೂ ಆರೋಗ್ಯ ಬೇಕು. ಆರೋಗ್ಯವೇ ಭಾಗ್ಯ(Health is Wealth) ಸಾಯಿ ಸಮಿತಿಯಿಂದ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆದು ಆ ಮೂಲಕ ಎಲ್ಲರು ಒಂದೇ ಎಂಬ ಭಾವನೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ 3 ಕಿ.ಮೀ., 5 ಕಿ.ಮೀ. ಹಾಗೂ 10 ಕಿ.ಮೀ. ಓಟಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರಿಗೆ 16 ಕಿ.ಮೀ. ಮತ್ತು ಪುರುಷರಿಗೆ 22 ಕಿ.ಮೀ. ಸೈಕಲ್ ರೈಡ್ ನಲ್ಲಿ(Cycle Ride) ಉತ್ದಾಹದಿಂದ ಪಾಲ್ಗೊಂಡರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪುರುಷ ಮತ್ತು ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ರಾಮದಾಸ್ ಆಚಾರಿ, ಸಾಯಿ ಸಂಸ್ಥೆಯ ಗೋವಾ ರಾಜ್ಯಾಧ್ಯಕ್ಷ ಮಹೇಶ ಪಾವಸ್ಕರ , ರಾಜ್ಯ ಸೇವಾ ಸಂಯೋಜಕ ಶ್ರೀಮತಿ ಪ್ರಿಯಾ ಪೈ, ಯುವ ಸಂಯೋಜಕ ವೆಂಕಟೇಶ ಬಡಿಗೇರ, ಆಧ್ಯಾತ್ಮಿಕ ಸಂಯೋಜಕರಾದ ಸುರೇಶ ಶೆಟ್ಟಿ, ಯುವ ಸಂಯೋಜಕ ನಂದಕುಮಾರ ಭಟ್, ತಿಮ್ಮಯ್ಯ ಮಿರಾಶಿ, ಮೋಹಿತ್ ಶೆಟ್, ಸೇವಾದಳ ಸಂಯೋಜಕರಾದ ರೇಷ್ಮಾ ಬಾಡಕರ, ಸಂಸ್ಥೆಯ ಜಿಲ್ಲಾ ಸಂಯೋಜಕ ಜಿ.ಡಿ. ಮನೋಜ್ ಸೇರಿದಂತೆ ವಿವಿಧ ಜಿಲ್ಲೆಯ ಸಾಯಿ ಸಂಸ್ಥೆ ಪ್ರಮುಖರು, ಸ್ವಯಂ ಸೇವಕರು ಭಕ್ತರು ಉಪಸ್ಥಿತರಿದ್ದರು.
ಇದನ್ನು ಓದಿ : ಭೀಕರ ಅಪಘಾತ — ಮೂವರು ಸಬ್ ಇನ್ಸಪೆಕ್ಟರ್ ಗಳು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ
ಹೊನ್ನಾವರದ ಹಾಡಗೇರಿಯಲ್ಲಿ ಘಟನೆ. ಏರಗನ್ ಗುಂಡು ಸಿಡಿದು ಯುವಕ ಮೃತ್ಯು.
