ಭಟ್ಕಳ (BHATKAL) : ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಹಾಳುಮಾಡುತ್ತಿರುವ ಗೋಗಳ್ಳರನ್ನ ಬಂಧಿಸುವಂತೆ ಭಟ್ಕಳದ ಮಜ್ಜಿಸೆ ಇಸ್ಲಾಹ್-ವ-ತಂಝೀಮ್(Majlis-E-Islah Wa Tanzeem) ಸಂಸ್ಥೆ ಆಗ್ರಹಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಂಸ್ಥೆ ಜಾಲಿ ಪಟ್ಟಣ ಪಂಚಾಯತ್ (Jali Pattana Panchayat) ಹಾಗೂ ಭಟ್ಕಳದ ಸುತ್ತಮುತ್ತ ಹೆಚ್ಚುತ್ತಿರುವ ಗೋವುಗಳ ಕಳ್ಳತನವು(Cattle Theft) ಸ್ಥಳೀಯ ಸಮುದಾಯವನ್ನು ತೀವ್ರ ಸಂಕಟಕ್ಕೆ ತಳ್ಳುತ್ತಿದೆ. ಈ ಕಳ್ಳತನದ ಘಟನೆಗಳು ಹಸಿವು ತೀರಿಸುವ ಜಾನುವಾರುಗಳ ಮೇಲೆ ಅವಲಂಬಿತರಾದ ರೈತರು(Farmers) ಮತ್ತು ದೈನಂದಿನ ಕೆಲಸಗಾರರಿಗೆ ಆರ್ಥಿಕ ನಷ್ಟವನ್ನುಂಟುಮಾಡಿದ್ದು, ಇದರಿಂದ ಸ್ಥಳೀಯ ಸಮುದಾಯದ ಸಾಮಾಜಿಕ ಶಾಂತಿಗೆ ದೊಡ್ಡ ಹೊಡೆತವನ್ನು ನೀಡಿದೆ. ಇತ್ತೀಚೆಗಷ್ಟೇ ಸಿಸಿಟಿವಿಯಲ್ಲಿ ಸೆರೆಯಾಗಿರುವ ಗೋವು ಕಳ್ಳತನದ ಘಟನೆ ಸಮಾಜದಲ್ಲಿ ಹೆಚ್ಚು ಆತಂಕ ಮತ್ತು ಅಶಾಂತಿಯನ್ನು ಹೆಚ್ಚಿಸಿದೆ.
ಮಜ್ಜಿಸೆ ಇಸ್ಲಾಹ್-ವ-ತಂಝೀಮ್ ಇಂತಹ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ ಸಂಸ್ಥೆ, ಇಂತಹ ಘಟನೆ ನೇರವಾಗಿ ನಮ್ಮ ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಹಾಳುಮಾಡುತ್ತವೆ. ಗೋವುಗಳ ಕಳ್ಳತನವು ಕೇವಲ ಆರ್ಥಿಕ ಹಾನಿಯಲ್ಲ, ಇದರಿಂದ ಜನರ ಮನಸ್ಸುಗಳಲ್ಲಿ ಭಯ ಮತ್ತು ಅಶಾಂತಿ ಮೂಡುತ್ತದೆ ಎಂದು ಹೇಳಿದೆ.
ಜನತೆ ಹಲವು ಬಾರಿ ಪೋಲೀಸ್ ಇಲಾಖೆಗೆ(Police Department) ದೂರು ನೀಡಿದರೂ, ಪ್ರಾಮಾಣಿಕ ಕ್ರಮ ಕೈಗೊಳ್ಳಲಿಲ್ಲ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದು ಜನರಲ್ಲಿ ನಿರಾಸೆಯನ್ನು ಹೆಚ್ಚಿಸಿದೆ, ಮತ್ತು ಅವರಲ್ಲಿ ಕಾನೂನು ಸಂರಕ್ಷಣೆಯ ಮೇಲಿನ ನಂಬಿಕೆ ಕುಸಿಯುತ್ತಿದೆ. ಈ ಪ್ರಕರಣಗಳಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಜನರಲ್ಲಿ ಇನ್ನಷ್ಟು ಅಸಮಧಾನ ಉಂಟಾಗುವ ಸಾಧ್ಯತೆಗಳಿವೆ.
ಇಸ್ಲಾಮಿನ ದೃಷ್ಟಿಯಲ್ಲಿ, ಕಳ್ಳತನ ಮಾಡಿದ ಜಾನುವಾರುಗಳ ಮಾಂಸವನ್ನು ಸೇವಿಸುವುದು ನಿಷಿದ್ದ. ಇದು ಘೋರ ಅನ್ಯಾಯ. ಮುಸ್ಲಿಮ್ ಸಮುದಾಯ(Muslim Community) ಇಂತಹ ಅನ್ಯಾಯವನ್ನು ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ಇಂತಹ ಕೃತ್ಯಗಳನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಅರೋಪಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿತರಿರಲಿ, ಯಾವುದೇ ವರ್ಗ ಅಥವಾ ಧರ್ಮಕ್ಕೆ ಸೇರಿದವನೂ ಆಗಿರಲಿ, ತಕ್ಷಣವೇ ಕೃತ್ಯ ಎಸಗಿದವರನ್ನು ಗುರುತಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಮತ್ತೆಂದು ಇಂತಹ ಕೃತ್ಯಕ್ಕೆ ಕೈಹಾಕಕೂಡದು ಎಂದು ಮಜ್ಜಿಸೆ ಇಸ್ಲಾಹ್-ವ-ತಂಝೀಮ್ ಪೊಲೀಸ್ ಇಲಾಖೆಯನ್ನು ಕೋರಿದೆ.
ಇದನ್ನು ಓದಿ : ಭಟ್ಕಳದಲ್ಲಿ ದನಗಳ್ಳರ ಹಾವಳಿ