ಕಾರವಾರ (KARWAR): ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರನ್ನ ಸರ್ಕಾರ ದಿಢೀರ್ ವರ್ಗಾವಣೆಗೊಳಿಸಿ ಆದೇಶಿಸಿದೆ.

ಅವರ ಸ್ಥಾನಕ್ಕೆ ಲಕ್ಮೀಪ್ರಿಯಾ ಕೆ (LAKSHMI PRIYA)ಅವರನ್ನ ನೇಮಿಸಲಾಗಿದೆ. ಲಕ್ಷ್ಮೀಪ್ರಿಯಾ ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೈಸೂರು ಇದರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಲಕ್ಷ್ಮೀಪ್ರಿಯಾ ಅವರು ಹಿಂದೆ ಕುಮಟಾದಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಸದ್ಯ ವರ್ಗಾವಣೆ ಆದ ಗಂಗೂಬಾಯಿ ಮಾನಕರ ಅವರನ್ನ ಕರ್ನಾಟಕ ಗೆಜೆಟಿಯರ್ ಇಲಾಖೆಯ ಚೀಪ್ ಎಡಿಟರ್ ಆಗಿ ನೇಮಿಸಲಾಗಿದೆ.