SIRSI.ಶಿರಸಿ : ಚಲಿಸುತ್ತಿರುವ ಸರ್ಕಾರಿ ಬಸ್ (GOVERNMENT BUS) ನೊಳಗೆ ಕಾಣಿಸಿಕೊಂಡ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಕುಮಟಾ (KUMTA) ರಸ್ತೆಯಲ್ಲಿ ಸಂಭವಿಸಿದೆ.
ಮಣ್ಣೆತ್ತಿನ ಅಮವಾಸೆಯ ದಿನವೇ ಪವಾಡ ಸದೃಶ್ಯ ರೂಪದಲ್ಲಿ ಬಾರೀ ಬೆಂಕಿ ಅನಾಹುತ ತಪ್ಪಿದೆ. ಮುರ್ಡೇಶ್ವರದಿಂದ ಅಥಣಿ ಕಡೆ ತೆರಳುತ್ತಿದ್ದ ಬಸ್ ನಲ್ಲಿ ಈ ಅವಘಡ ನಡೆದಿದೆ.
ಸುಮಾರು 25 ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಒಳಗೆ ಬೆಂಕಿ ಕಂಡು ಬೆಚ್ಚಿ ಬಿದ್ದ ಪ್ರಯಾಣಿಕರು ಕೂಗುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿದ್ದಾನೆ.
ಪ್ರಯಾಣಿಕರು ಬಸ್ ನಿಂದ ಇಳಿಯುತ್ತಿದ್ದಂತೆ ಟಯರ್ ಸ್ಪೋಟಗೊಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.