ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಗಾಳಿ ಮತ್ತು ಮಳೆಗೆ ಬೃಹತ್ ಹಡಗೊಂದರ ಬಾರ್ಜ್(Barge) ತೇಲಿ ಬಂದ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ(Bhatkal) ತಾಲೂಕಿನ ಜಾಲಿ ಕಡಲತೀರದಲ್ಲಿ (Kali Beach) ಉದ್ದನೆ ಬಾರ್ಜ್ ತೇಲಿ ಬಂದಿದೆ.  ಇಂದು ಬೆಳಿಗ್ಗೆ ತೀರಕ್ಕೆ ಬಂದ ಬಾರ್ಜ್ ಕಂಡು ಸ್ಥಳೀಯರು  ಕರಾವಳಿ ಕಾವಲು ಪಡೆಗೆ(Coastal security Police) ಮಾಹಿತಿ ನೀಡಿದ್ದಾರೆ.

ಕೊಚಿನ್ ಶಿಪ್ ಯಾರ್ಡ್(Kochhin Ship yard) ಎಂದು ಬರೆದಿರುವ ಈ ಬಾರ್ಜ್ ವಾಣಿಜ್ಯ ಹಡಗೊಂದರದ್ದಾಗಿದೆ ಎಂದು ತಿಳಿದು ಬಂದಿದೆ. ಬಾರೀ ಗಾಳಿಯಿಂದಾಗಿ ಹಡಗಿಗೆ ಕಟ್ಟಿದ  ರೋಪ್ ತುಂಡಾಗಿದ್ದರಿಂದ   ಬಾರ್ಜ್ ಕಡಲತೀರಕ್ಕೆ ಬಂದು ಬಿದ್ದಿದೆ. ಸ್ಥಳಕ್ಕೆ ಕರಾವಳಿ ಕಾವಲು ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‌ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಕರಾವಳಿ ಭಾಗದಲ್ಲಿ ಬಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು ಗಾಳಿಯು ಹೆಚ್ಚಾಗಿದೆ. ಹೀಗಾಗಿ ಕಡಲ ತೀರದ ಜನರು ಆತಂಕದಿಂದ ಇದ್ದಾರೆ.

ಇದನ್ನು ಓದಿ : ಶಾಲೆಗಳಿಗೆ ರಜೆ. ಈ ತಾಲೂಕುಗಳಿಗೆ ಮಾತ್ರ ಅನ್ವಯ

ಜೆಜೆಎಂ ಕಾಮಗಾರಿಯಲ್ಲಿ ಸಿಲುಕಿದ ಸರ್ಕಾರಿ ಬಸ್

ದೇವಿಮನೆ ಘಟ್ಟದಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರ ನಿರ್ಬಂಧ.