ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panjim) : ಶಾಲಾ ಆವರಣದಲ್ಲಿ‌ ವಾಮಾಚಾರ ಮಾಡಿರುವ ಘಟನೆ ಗೋವಾದ(Goa) ಹಳದೋಣದಲ್ಲಿ  ನಡೆದಿದೆ.

ಯುವತಿಯೋರ್ವಳು  ಮಧ್ಯೆರಾತ್ರಿ  ಸುಮಾರಿಗೆ ಇಲ್ಲಿನ  ಸೇಂಟ್ ಥಾಮಸ್ ಶಾಲೆ(St Thomas School) ಆವರಣದಲ್ಲಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ವಾಮಾಚಾರ ನಡೆಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿ ಒಬ್ಬಳೇ ಇರುವುದು ಕಂಡುಬಂದಿದೆ.

ವರ್ತುಲಾಕಾರದಲ್ಲಿ ರೇಖೆ ಎಳೆದು ಅದರಲ್ಲಿ ತಾನು ಕುಳಿತು ಸುತ್ತಲೂ ಮಾನವನ ಎಲುಬು(Bone), ಮೊಟ್ಟೆ(Egg), ಎಲೆ ಅಡಿಕೆ(Leaf Arecnut), ಮೇಣದಬತ್ತಿ(Candle) ಹಚ್ಚಿ ತಾನು ಮಧ್ಯಭಾಗದಲ್ಲಿ ಕುಳಿತುಕೊಂಡಿದ್ದಳು. ಈ ಸಂದರ್ಭದಲ್ಲಿ ಸ್ಥಳೀಯರು ಬಂದು ಈಕೆಯನ್ನು ಪ್ರಶ್ನಿಸಿದ್ದರು. ಆದರೆ ಆಕೆ  ಸ್ಥಳೀಯರಿಗೆ ಸರಿಯಾದ ಉತ್ತರ ನೀಡಿಲ್ಲ. ಅಲ್ಲದೇ  ಸ್ಥಳೀಯರ ಮೇಲೆ ಯುವತಿ ಹಲ್ಲೆ ನಡೆಸಲು ಮುಂದಾಗಿದ್ದಳು ಎನ್ನಲಾಗಿದೆ.

ವಿಷಯವನ್ನು ಪೊಲೀಸರಿಗೆ ತಿಳಿಸಲು ಮುಂದಾದಾಗ ‌ಯುವತಿ ತನ್ನೆಲ್ಲಾ  ವಸ್ತುಗಳನ್ನು  ಬ್ಯಾಗ್  ಒಳಗೆ ತುಂಬಿ  ಪರಾರಿಯಾಗಲು ಯತ್ನಿಸಿದ್ದಾಳೆ. ಘಟನಾ ಸ್ಥಳಕ್ಕೆ  ಪೊಲೀಸರು  ಆಗಮಿಸಿ ಯುವತಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ‌. ಪೊಲೀಸರ ವಿಚಾರಣೆ(Police Enguiry) ಸಂದರ್ಭದಲ್ಲಿ   ತಾನು ಧ್ಯಾನ(Meditation) ಮಾಡುವ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ಯುವತಿ ಹೇಳಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಇದನ್ನು ಓದಿ : ಬಿಗ್ ಬಾಸ್ ಗೆ ಶಾಕ್

ದೇವಭಾಗದಲ್ಲಿ ರಾಶಿ ರಾಶಿ ಮೀನುಗಳು.

ಅಕ್ಟೋಬರ್ 18ರವರೆಗೆ ಸಮೀಕ್ಷೆ ವಿಸ್ತರಣೆ

ಕುವೈತ್ ನಲ್ಲಿ ಉದ್ಯೋಗ ಕೊಡಿಸುವ ವಂಚನೆ