ಬೆಂಗಳೂರು(BANGLORE) : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ(IMD) ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ದೇಶದ ಕರಾವಳಿ ರಾಜ್ಯಗಳಾದ ಕೇರಳ(KERALA), ಕರ್ನಾಟಕ(KARNATAKA), ಗೋವಾ(GOA), ಮಹಾರಾಷ್ಟ್ರ(MAHARASHTRA) ಹಾಗೂ ಗುಜರಾತ್(GUJARAT) ರಾಜ್ಯಗಳಿಗೆ ಚಂಡಮಾರುತದ(CYCLONE) ಹೊಡೆತ ತಟ್ಟಲಿದೆ. ಎಂದು ತಿಳಿಸಿದೆ. ಕರ್ನಾಟಕ, ಕೇರಳ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸಮುದ್ರದ ಅಬ್ಬರ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.
ಇಂದು ರಾಜ್ಯದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್(ORANGE ALERT) ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಗದಗ, ಬಾಗಲಕೋಟೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ನಾಳೆ ಸೆಪ್ಟೆಂಬರ್ 2 ರಂದು ಹಳದಿ ಅಲರ್ಟ್ ನ್ನ ಘೋಷಣೆ ಮಾಡಲಾಗಿದೆ.
ಇದನ್ನು ಓದಿ : ಕಾಡುಕುರಿ ಬೇಟೆಯಾಡಿದ ವ್ಯಕ್ತಿ ಮೇಲೆ ದಾಳಿ
ಅನುದಾನದಲ್ಲಿ ತಾರತಮ್ಯ ಸದಸ್ಯರಿಂದ ಪ್ರತಿಭಟನೆ
ಬಿಜೆಪಿ ಎರಡು ಬಣಗಳ ನಡುವೆ ಮಾರಾಮಾರಿ