ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ(Uttarakannada District) ಯುವ ಭಕ್ತರು(Youth Devotees) ಪವಿತ್ರ ಕೇದಾರನಾಥ ಧಾಮದಲ್ಲಿ(Kedaranath Dhama) ಶರಾವತಿ ಪಂಪ್ಡ್ ಯೋಜನೆಗೆ(Sharavati Pumped Project) ವಿರೋಧವಾಗಿ ಧ್ವನಿ ಎತ್ತಿದ್ದಾರೆ.
ಕಾರವಾರ(Karwar) ನಗರದ ಅಭಿಷೇಕ ಕಳಸ ಮತ್ತು ಹೊನ್ನಾವರದ(Honnavar) ವಿನಾಯಕ ನಾಯ್ಕ ಅವರು ಧಾರ್ಮಿಕ ಹಾಗೂ ಸಮಾಜಮುಖಿ ಮನೋಭಾವದಿಂದ ಉತ್ತರಾಖಂಡದ(Uttarakhanda) ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ(Kedaranath Temple) ಭಕ್ತಿ ಯಾತ್ರೆಗೆ ತೆರಳಿದ್ದರು. ದೇವಾಲಯದ ಪವಿತ್ರ ವಾತಾವರಣದಲ್ಲಿ ಭಕ್ತಿಯಿಂದ ಪೂಜೆ-ಪ್ರಾರ್ಥನೆ(Pooja-Prayer) ಸಲ್ಲಿಸುತ್ತಾ, ಅವರು ತಮ್ಮ ಹೃದಯದ ಉದ್ದೇಶವನ್ನು ದೇವರ ಮುಂದೆ ಅರ್ಪಿಸಿದರು.
ಹೊನ್ನಾವರ ತಾಲೂಕಿನಲ್ಲಿ(Honnavar Taluku) ಸರ್ಕಾರದ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಶರಾವತಿ ಪಂಪ್ಡ್ ಸ್ಟೋರೆಜ್(Sharavati Pumped Storage Project ) ಯೋಜನೆ ಕುರಿತು ಅವರು ತಮ್ಮ ಆತಂಕ ಮತ್ತು ಅಭಿಪ್ರಾಯವನ್ನು ದೇವರ ಸನ್ನಿದಿಯಲ್ಲಿ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಗೆ ಅನಿವಾರ್ಯವಲ್ಲದೆ ಈ ಯೋಜನೆ , ಸ್ಥಳೀಯ ಪರಿಸರ (Environment) ಹಾಗೂ ಜನರ ಹಿತಾಸಕ್ತಿಗೆ ಹಾನಿಕಾರಕವಾಗಬಹುದು ಎಂಬ ದೃಷ್ಟಿಕೋನದಿಂದ, ಅವರು ಈ ಯೋಜನೆ ವಿರೋಧವಾಗಿ ಧ್ವನಿ ಎತ್ತಿ ಜಿಲ್ಲೆಯ ಜನರ ಗಮನ ಸೆಳೆದಿದ್ದಾರೆ.
ಭಕ್ತಿಯಿಂದ ಮತ್ತು ಜಾಗೃತಿ ಮನೋಭಾವದಿಂದ, ಅವರು ಕೇದರಾನಾಥೇಶ್ವರ ದೇವರಿಗೆ ಪ್ರಾರ್ಥಿಸಿ, ಈ ಯೋಜನೆಯ ಪರಿಣಾಮಗಳಿಂದ ತಮ್ಮ ಜಿಲ್ಲೆಯ ತಾಯ್ನಾಡಿನ ಪರಿಸರ, ನದಿ ಜಲಸಂಪತ್ತು ಮತ್ತು ಭೂಮಿಯ ಹಿತವನ್ನು ಕಾಪಾಡಲು ದೇವರು ಮಾರ್ಗದರ್ಶನ ನೀಡಲಿ ಎಂದು ವಿನಂತಿಸಿದರು. ಈ ಯಾತ್ರೆಯ ಮೂಲಕ ಅವರು ದೇವಭಕ್ತಿ ಹಾಗೂ ಸಮಾಜದ ಕ್ಷೇಮದ ಪರಸ್ಪರ ಸಂಬಂಧವನ್ನು ಹಿಗ್ಗಿಸುವುದರಲ್ಲಿ ಪ್ರಮುಖ ಸಂದೇಶ ನೀಡಿದ್ದಾರೆ.
ಇದನ್ನು ಓದಿ : ಗ್ರಾಹಕರ ವೇಷದಲ್ಲಿ ಬಂದ ಕಳ್ಳ ಮಾಡಿದ್ದೇನು ? ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ಕೂಟಿಗೆ ಟಿಪ್ಪರ್ ಡಿಕ್ಕಿ: ಮಹಿಳೆ ಸ್ಥಳದಲ್ಲಿ ಸಾವು. ಇಬ್ಬರಿಗೆ ಗಾಯ.
ಕಾರವಾರ ಮತ್ತು ಗೋವಾ ಗಡಿಯಲ್ಲಿ ಪ್ರಧಾನಿ ಮೋದಿ ದೀಪಾವಳಿ ಆಚರಣೆ.