Marriage News : ತಮಿಳುನಾಡು (TAMILUNADU): ಈಕೆ ಅಂತಿಂಥ ಆಸಾಮಿಯಲ್ಲ. ಈಕೆಯ ಬಲೆಗೆ ಬಿದ್ದವರು ಕೇವಲ ಸಾಮಾನ್ಯರಲ್ಲ. ಅಧಿಕಾರಿಗಳು, ದೊಡ್ಡ ದೊಡ್ಡವರು.

ತಮಿಳುನಾಡಿನ ಮಹಿಳೆಯೊಬ್ಬಳ ಖತರ್ನಾಕ್ ಮದುವೆ ಕಥೆ. ತಿರುಪ್ಪರು ನಿವಾಸಿಯಾಗಿರೋ ಸಂಧ್ಯಾ ಎಂಬಾಕೆಯ ಮದುವೆ ಕಥೆ (marriage Story).  ಆಗಿದ್ದು ಒಂದೆರಡಲ್ಲ. ಬರೋಬ್ಬರಿ ಹಾಫ್ ಸೆಂಚುರಿ. ಮಹಿಳೆಯರಲ್ಲಿ ಇಷ್ಟು ಮದುವೆಯಾದವರು ಬಹುಷಃ ಬೇರೆ ಯಾರು ಇರಲಿಕ್ಕಿಲ್ಲ.

ಈಕೆಯ ಮ್ಯಾರೇಜ್ ಡೈರಿಯಲ್ಲಿ   ಪೊಲೀಸ್ (POLICE) ಅಧಿಕಾರಿಗಳು ಹಾಗೂ ಅನೇಕ ಇನ್ಸ್‌ಪೆಕ್ಟರ್ಗಳೂ ಇದ್ದಾರಂತೆ.  ಈಕೆಯ ಮದುವೆ ಆಟ (MARRIAGE GAME) ಬಯಲಾಗಿದ್ದೇ ಈಕೆ ಕಟ್ಟಿಕೊಂಡಿರೋ ಓರ್ವ ಗಂಡನಿಂದ. ತಿರುವೂ‌ರ್ ಗ್ರಾಮದ ಓರ್ವ ಈಕೆಯನ್ನು ಮದುವೆಯಾಗಿದ್ದ. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ ಈಕೆಯ ವರ್ತನೆ ಹಾಗೂ ನಡವಳಿಕೆಯಲ್ಲಿ ಬದಲಾವಣೆಯಾಗಿದೆ.  ಅನುಮಾನಗೊಂಡು ಹೇಗಾದ್ರು ಮಾಡಿ   ಆಕೆಯ ಡಿಟೇಲ್ಸ್ ಪತ್ತೆ ಮಾಡಲು ಮುಂದಾಗಿದ್ದಾನೆ. ಆಕೆಯ ಆಧಾರ್ ಕಾರ್ಡ್ (ADHAR CARD) ಪತಿಯ ಹೆಸರಿನ ಜಾಗದಲ್ಲಿ ಬೇರೆ ವ್ಯಕ್ತಿಯ ಹೆಸರಿರೋದು ಪತ್ತೆಯಾಗಿದೆ. ಇಷ್ಟಾದ ಮೇಲೆ ಯಾರೂ ಸುಮ್ಮನಿರುತ್ತಾರೆ ಹೇಳಿ.  ಆ ವ್ಯಕ್ತಿಯೇ ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರು ಬಂಧಿಸಿ ವಿಚಾರಿಸಿದಾಗ ಆಕೆಯ ಮದುವೆ ಜಾತಕ ಬಯಲಾಗಿದೆ.   ಹಣ ಮತ್ತು ಆಭರಣಕ್ಕಾಗಿ ಇ ರೀತಿ ಒಬ್ಬೊಬ್ಬರನ್ನೇ ಬದಲಾಯಿಸುತ್ತಿದ್ದೆ ಎಂದಿದ್ದಾಳಂತೆ.
ಸುಮಾರು 30 ವರ್ಷದ ಈಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭೇಟಿ ಮಾಡೋದು, ಸಲುಗೆ ಬೆಳೆಸಿಕೊಳ್ಳೋದು, ಆಮೇಲೆ ಮದುವೆ ನಾಟಕ ಆಡಿ ಕೈಕೊಟ್ಟು, ಬೇರೆ ಕುರಿಯನ್ನ ಹುಡುಕುತ್ತಿದ್ದೆ ಎಂದು ಪೋಲೀಸರ ಬಳಿ ಹೇಳಿದ್ದಾಳೆ.

ಪಾಪ. ಚೆಂದದ ಸುಂದರಿ, ನೋಡಿ ಮದುವೆ ಆಗೋಣ ಅಂದುಕೊಂಡವರ ಕನಸು ಭಗ್ನವಾಗಿದೆ. ಇನ್ನೂ ಯಾರ್ಯಾರು ಆಕೆಯ ಲಿಸ್ಟಲ್ಲಿ ಇದ್ದರೋ ಆಕೆಗೆ ಮಾತ್ರ ಗೊತ್ತು.