ಕಾರವಾರ: ಅಂಕೋಲಾ ತಾಲುಕಿನ ಹಾರವಾಡ ಮತ್ತು ಕಾರವಾರ ತಾಲೂಕಿನ ಮಾಜಾಳಿ ಸೇರಿದಂತೆ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲೂ ಸಮುದ್ರ ಕೊರತದಿಂದ ಮೀನುಗಾರ ಕುಟುಂಬದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ತಾವು ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸಮುದ್ರ ಕೊರೆತೆಯಾಗದಂತೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಜಿಲ್ಲಾಧಿಕಾರಿಗಳನ್ನ ಒತ್ತಾಯಿಸಿದರು.
ಉತ್ತರಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸದ ಬಗ್ಗೆ ಹಾಗೂ ಸಮುದ್ರ ಕೊರೆತದ ಬಗ್ಗೆ ಚರ್ಚೆ ನಡೆಸಿದರು.
ಕಾರವಾರ ಗಾಂಧಿ ಮಾರುಕಟ್ಟೆಯ ಬಳಿ ನೂತನ ಕಟ್ಟಡ ನಿರ್ಮಾಣ, ಕಾರವಾರ ಕಡಲತೀರದ ಸ್ವಚ್ಚತೆಗೊಳಿಸುವುದು, ಈಗಾಗಲೇ ನಗರಸಭೆಯಿಂದ ನಿರ್ಮಾಣ ಮಾಡಿದ ಗಾರ್ಡನ್ ಗಳು ನಿರ್ವಹಣೆ ಮಾಡದೆ, ಗಿಡಗಳು ಸಾಯುವ ಸ್ಥಿತಿಯಲ್ಲಿದೆ. ಸದ್ಯ ನಗರಸಭೆಗೆ ಆಡಳಿತಾಧಿಕಾರಿ ತಾವು ಇರುವ ಕಾರಣ ಈ ಎಲ್ಲಾ ಕಾರ್ಯಗಳು ತಮ್ಮ ಅವಧಿಯಲ್ಲಿ ಆಗಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ವೇಳೆ ಹಾಲಿ ನಗರಸಭೆ ಸದಸ್ಯರು ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಮನವಿ ಮಾಡಿದರು. ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಗೆ ಒದಗಿಸಬಹುದಾದ ಯಾವುದೇ ಮೂಲಭೂತ ಸೌಕರ್ಯಗಳಿಗೆ ನನ್ನ ಸಹಮತವಿದ್ದು ಬಡವರು , ಶೃಮಿಕರು, ಕೃಷಿಕರ ಏಳಿಗೆಗಾಗಿ ಯಾವಾಗಲೂ ನನ್ನ ಸಹಕಾರವಿದೆ ಎಂದರು.