ಕುಮಟಾ(KUMTA) : ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಕುಮಟಾ ತಾಲೂಕಿನ ಕಿಮಾನಿ ಬಳಿ ಸಂಭವಿಸಿದೆ.
ಗುಂದ ಗ್ರಾಮದ ಬಳಿ ಅಘನಾಶಿನಿ(AGHANASHINI RIVER) ನದಿಯಲ್ಲಿ ಇಂದು ಬೆಳಿಗ್ಗೆ ಮಹಿಳೆಯ ಶವವಾಗಿ ಪತ್ತೆಯಾಗಿದ್ದಾಳೆ. ಸಾಂತಗಲ್ ನಿವಾಸಿ ಶಿಲ್ಪಾ ರಮೇಶ ನಾಯ್ಕ (45) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಶಿಲ್ಪಾ ಎರಡು ದಿನಗಳ ಹಿಂದೆ ಕುಮಟಾ ಸರಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯವರ ಬಳಿ ಹೇಳಿ ಹೋಗಿದ್ದಳು. ಆಕೆ ಮನೆಗೂ ವಾಪಸ್ ಬರದೆ, ಆಸ್ಪತ್ರೆಗೂ ಹೋಗದೆ ನಾಪತ್ತೆಯಾಗಿದ್ದಳು. ಮನೆಯವರು ಎಷ್ಟು ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಗುಂದಾ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದಾಳೆ. ಗೋಕರ್ಣ ಪೊಲೀಸ್ ಠಾಣೆ(GOKARN POLICE STATION) ವ್ಯಾಪ್ತಿಯಲ್ಲಿ ಶವ ದೊರೆತಿದೆ.
ಇದನ್ನು ಓದಿ : ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರ ಬಂಧನ