ಹೊನ್ನಾವರ(HONNAVAR) : ಭಾರೀ ಮಳೆಯಿಂದಾಗಿ ಮನೆ ಕುಸಿದು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ವೃದ್ಧೆಯನ್ನ ರಕ್ಷಿಸಿದ ಘಟನೆ ತಾಲೂಕಿನ ಆರೋಳ್ಳಿಯಲ್ಲಿ ನಡೆದಿದೆ.
80 ವರ್ಷದ ಸುಲಭ ಸುಬ್ರಾಯ ಕಾಮತ್ ಎಂಬಾಕೆಯೇ ಸಾವಿನ ದವಡೆಯಿಂದ ಪಾರಾದವಳು. ಅಜ್ಜಿ ಮನೆಯ ಹಿಂಬದಿಯಲ್ಲಿ ಕುಳಿತಿದ್ದಾಗ ಭಾರೀ ಮಳೆ ಸುರಿಯುತಿತ್ತು. ಬಿರುಕು ಬಿಟ್ಟಿದ್ದ ಮನೆ ಗೋಡೆ ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿತು. ಆಗ ಅಲ್ಲೇ ಕುಳಿತಿದ್ದ ವೃದ್ದೆ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಳು. ಹಲವು ಸಮಯವದರೆಗೆ ಮಣ್ಣಿನಡಿ ಸಿಲುಕಿದ್ದಳು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ವೃದ್ಧೆಯನ್ನ ಮಣ್ಣಿನಡಿಯಿಂದ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನು ಓದಿ : ಆಸ್ಪತ್ರೆಗೆ ಹೋದವಳು ನದಿಯಲ್ಲಿ ಪತ್ತೆ.