ಬೆಂಗಳೂರು(BANGLORE) :  ತನ್ನನ್ನೇ ಹೋಲುವ ಭಿಕ್ಷುಕನನ್ನ ಪರಿಚಯ ಮಾಡಿಕೊಂಡು ವ್ಯಕ್ತಿಯೊರ್ವ ಆತನನ್ನ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶ್ವಾಮಿಗೌಡ ಮತ್ತು ಆತನ ಪತ್ನಿ ಶಿಲ್ಪಾ ದುಷ್ಕೃತ್ಯ ಎಸಗಿದವರು. ಆಗಸ್ಟ್ 13 ರಂದು ಹಾಸನ(HASAN) ಜಿಲ್ಲೆಯ ಅರಸೀಕೆರೆ(ARASIKERI) ತಾಲ್ಲೂಕಿನ ಗಂಡಸಿ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು.  ಕೋಟಿ ರೂ. ಹಣಕ್ಕಾಗಿ ಮುನಿಶ್ವಾಮಿಗೌಡ ಆಕ್ಸಿಡೆಂಟ್ ನಲ್ಲಿ ಸತ್ತ ರೀತಿಯಲ್ಲಿ ಶವ ಪತ್ತೆಯಾಗಿತ್ತು.

ಮೊದಲೇ ತನ್ನನ್ನ ಹೋಲುವ ಭಿಕ್ಷುಕನನ್ನ ಪರಿಚಯಿಸಿಕೊಂಡಿದ್ದ ಮುನಿಶ್ವಾಮಿಗೌಡ ನ ಆಗಸ್ಟ್ 12 ಕ್ಕೆ ಶಿಡ್ಲಘಟ್ಟಕ್ಕೆ (SHIDLAGHATTA) ಹೋಗೋಣ ಎಂದಿದ್ದ. ಅದರಂತೆ ಕಾರು ಪಂಕ್ಚರ್ ಆಗಿದೆ ಟೈರ್ ಬದಲಿಸು ಅಂತ ಅಮಾಯಕನಿಗೆ  ಮುನಿಸ್ವಾಮಿಗೌಡ ಹೇಳಿದ್ದ. ರಸ್ತೆ ಪಕ್ಕ ಕಾರು ನಿಲ್ಲಿಸಿಕೊಂಡು ಟೈರ್ ಬದಲಿಸುವಾಗ ಅಮಾಯಕನ ಮೇಲೆ ಲಾರಿ ಹರಿದಿತ್ತು.
ಮೊದಲೇ ಮುನಿಸ್ವಾಮಿಗೌಡ ಅಮಾಯಕನ ಮೇಲೆ ಲಾರಿ ಹಾಯಿಸಿ ಕೊಲ್ಲಲು ಲಾರಿ ಮತ್ತು ಚಾಲಕನ  ಬುಕ್ ಮಾಡಿಕೊಂಡಿದ್ದ. ಆತ ಸತ್ತ ನಂತರ ಕಾರು ಬಿಟ್ಟು ಮುನಿಶ್ವಾಮಿಗೌಡ ಪರಾರಿಯಾಗಿದ್ದ.

ತನ್ನ ಗಂಡ ಸತ್ತಿದ್ದಾನೆಂದು ಮುನಿಶ್ವಾಮಿಗೌಡ ನ ಪತ್ನಿ ಶಿಲ್ಪಾರಾಣಿ ಕಣ್ಣೀರಾಕಿ  ಪೊಲೀಸರಿಂದ ಶವ ಪಡೆದಿದ್ದಳು. ಚಿಕ್ಕಕೋಲಿಗ ಗ್ರಾಮದಲ್ಲಿ ಪತ್ನಿಯೇ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಳು.  ಸಂಬಂಧಿಕರೆಲ್ಲಾ  ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

ಕೆಲ ದಿನಗಳ ನಂತರ ತನ್ನ ಸಂಬಂಧಿ ಪೊಲೀಸ್ ಅಧಿಕಾರಿ   ಎದುರು ಪ್ರತ್ಯಕ್ಷನಾಗಿದ್ದ ಮುನಿಶ್ವಾಮಿಗೌಡ. ಆಗ ಸತ್ತವನು ಹೇಗೆ ಎದ್ದು ಬಂದಾ ಅಂತ ಶಾಕ್ ಆಗಿದ್ದ ಪೊಲೀಸ್ ಅಧಿಕಾರಿ. ಇನ್ಸುರೆನ್ಸ್ ಕ್ಲೈಮ್ ಗಾಗಿ ಸಾಲ ತೀರಿಸಿಕೊಳ್ಳಲು ಬೇರೆಯವನ ಸಾಯಿಸಿ ನಾನೇ ಸತ್ತು ಹೋಗಿರುವ ನಾಟಕ ಮಾಡಿದ್ದಾಗಿ ಮುನಿಸ್ವಾಮಿ ಗೌಡ ಒಪ್ಪಿಕೊಂಡಿದ್ದಾನೆ. ತಡ ಮಾಡದೇ ಗಂಡಸಿ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ  ಮುನಿಶ್ವಾಮಿಗೌಡನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪತಿಗೆ ಸಾಥ್ ನೀಡಿದ ಹೆಂಡತಿ ಈಗ ಕಂಬಿ ಎಣಿಸಬೇಕಾಗಿದೆ. ಪಾಪ ಇನ್ಸೂರೆನ್ಸ್ ಹಣ ಏಣಿಸುವ ಕೈಗೆ ಕೋಳ ಬಿದ್ದಿದೆ.

ಇದನ್ನು ಓದಿ : ಪೊಲೀಸ್ ಅಧಿಕಾರಿಯ ಏನಿದು ಹಕಿಕತ್