ಕಾರವಾರ(KARWAR) : ಸಂಸದನಾಗಿ ಅಧಿಕಾರಕ್ಕೇರಿದ ನೂರೇ ದಿನದಲ್ಲಿ ರೈಲ್ವೆ ಸೇವೆಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡುತ್ತಿರುವ ಉಡುಪಿ ಸಂಸದರ(UDUPI MP) ದಕ್ಷತೆಗೆ ಮತ್ತೊಂದು ಗರಿ ಲಭಿಸಿದೆ. ಕರಾವಳಿ ಮತ್ತು ತಿರುಪತಿ (KARAVALI to TIRUPATI) ನಡುವೆ ರೈಲು ಸಂಪರ್ಕದ ದಶಕಗಳ ಕನಸು ಈಡೇರಿದೆ.
ತಿರುಪತಿಯ ಜತೆಗೆ ಹೈದರಾಬಾದ್ (HYDERABAD)ನಗರಕ್ಕೂ ರೈಲು ಸಂಪರ್ಕ ಲಭಿಸಿದ್ದು, ಕಾಚಿಗುಡ ಮಂಗಳೂರು(MANGLORE) ವಾರಕ್ಕೆರಡು ದಿನದ ರೈಲನ್ನು ಮುರುಡೇಶ್ವರಕ್ಕೆ (MURDESHWAR)ವಿಸ್ತರಣೆ ಮಾಡಿ ಭಾರತೀಯ ರೈಲ್ವೇ ಆದೇಶ ಮಾಡಿದೆ. ಇದು ಜಿಲ್ಲೆಯ ತಿಮ್ಮಪ್ಪನ ಭಕ್ತರಿಗೆ ಸಂತಸದ ವಿಚಾರವಾಗಿದೆ.
ಕರಾವಳಿಯಿಂದ ತಿರುಪತಿ ಹೈದರಾಬಾದ್ ರೈಲು ಬೇಕು ಎಂಬ ಬೇಡಿಕೆಯನ್ನು ಕಳೆದ ಕೆಲವು ವರ್ಷಗಳಿಂದ ಕೇಳುತಿದ್ದ ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಈ ಬಾರಿ ಸ್ಪಷ್ಟ ಬೇಡಿಕೆ ಇಟ್ಟಿತ್ತು. ಈ ವಿಷಯ ತಿಳಿದ ಉತ್ತರಕನ್ನಡ ರೈಲ್ವೇ ಸಮಿತಿಯು (UTTARKANNADA RAILWAY COMMITTEE) ಉಡುಪಿ ಸಂಸದರನ್ನು ಸಂಪರ್ಕಿಸಿ ಯಾವುದೇ ಹೊಸ ರೈಲುಗಳು ಆರಂಭವಾಗುವುದಿದ್ದರೂ ಅದು ಉತ್ತರ ಕನ್ನಡಕ್ಕೂ ಲಭಿಸುವಂತೆ ಮಾಡಬೇಕೆಂದು ಮನವಿ ಮಾಡಿತ್ತು.
ಈ ಬೇಡಿಕೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ(KOTA SRINIVAS POOJARI), ತಾನು ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ ಜಿಲ್ಲೆಗೂ ಈ ಸೇವೆ ಸಿಗಬೇಕು ಎಂದು ತಕ್ಷಣವೇ ರೈಲ್ವೆ ಸಚಿವರಿಗೆ ಪತ್ರ ಬರೆದದ್ದು ಮಾತ್ರವಲ್ಲದೇ , ರೈಲ್ವೇ ಮಂಡಳಿ (RAILWAY BOARD) ದೆಹಲಿಗೂ ತೆರಳಿ ಪ್ರಯತ್ನ ಪಟ್ಟಿದ್ದರು.
ಸಂಸದರ ಮನವಿಯನ್ನು ಪರಿಗಣಿಸಿದ ರೈಲ್ವೇ ಸಚಿವಾಲಯ(RAILWAY MINISTRY) ಕುಂದಾಪುರದಿಂದ(KUNDAPURA) ಮುಂದುವರಿಸಿ ಇದೀಗ ಕಾಚಿಗುಡ ಮಂಗಳೂರು ರೈಲನ್ನು ಉಡುಪಿ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಸಂಜೆ ನಾಲ್ಕು ಘಂಟೆಗೆ ಮುರುಡೇಶ್ವರ ಬಿಡುವ ರೈಲು ವಾರಕ್ಕೆರಡು ವಾರಿ ಬುಧವಾರ ಮತ್ತು ಶನಿವಾರ ಮಂಗಳೂರು -ಕೊಯಂಬತ್ತೂರು(MANGLORE -KOIMBOTTURU) ಮೂಲಕ ತಿರುಪತಿ ಸಮೀಪದ ರೆಣಿಗುಂಟಕ್ಕೆ ಮರುದಿನ ಬೆಳಿಗ್ಗೆ 11 ಕ್ಕೆ ತಲುಪಲಿದೆ. ಬಳಿಕ ಅಲ್ಲಿಂದ ಹೈದರಾಬಾದಿಗೆ ಪ್ರಯಾಣ ಮುಂದುವರಿಸಲಿದೆ.
ಮತ್ತೆ ಶುಕ್ರವಾರ ಹಾಗು ಮಂಗಳವಾರ ಸಂಜೆ 5 ಕ್ಕೆ ರೇಣಿಗುಂಟ ಬರುವ ರೈಲು ಅಲ್ಲಿಂದ ಮರುದಿನ ಮದ್ಯಾಹ್ನ ಎರಡು ಗಂಟೆಗೆ ಮುರುಡೇಶ್ವರಕ್ಕೆ ಬರಲಿದೆ. ಕುಮಟಾ ಶಾಸಕ ದಿನಕರ ಶೆಟ್ಟಿ ಮತ್ತು ಉತ್ತರಕನ್ನಡ ರೇಲ್ವೆ ಸಮಿತಿ ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನ ಸಫಲವಾಗಿದೆ. ಇನ್ನೊಂದು ವಾರದಲ್ಲಿ ರೈಲು ಸಂಚಾರ ಆರಂಭಿಸುವ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : ರಾಮಕಥಾ ಕೇಳಲು ಬಂದವ ಕಡಲಲ್ಲಿ ಮುಳುಗಿದ