ಭಟ್ಕಳ(Bhatkal): ಅರಬ್ಬೀ ಸಮುದ್ರದಲ್ಲಿ(Ocean sea) ನೀರಿಗೆ ಬಿದ್ದ ಮೀನುಗಾರ ಸಾವನ್ನಪ್ಪಿದ ಘಟನೆ ನೇತ್ರಾಣಿ(Netrani) ಸಮೀಪ ಸಂಭವಿಸಿದೆ.

ಮಾಸ್ತಿ ಶುಕ್ರ ಗೊಂಡ (26) ಮೃತ ದುರ್ದೈವಿಯಾಗಿದ್ದಾನೆ. ಭಟ್ಕಳ ತಾಲೂಕಿನ ಹೆಬಳೆಯ (Heble) ಸಂಪನಕೇರಿ ನಿವಾಸಿ ಎಂದು ತಿಳಿದುಬಂದಿದೆ. ಮಲ್ಪೆಯ(Malpe) ಸುಶೀಲಮ್ಮ ಹೆಸರಿನ  ಬೋಟಿನಲ್ಲಿ ಕೆಲಸ ಮಾಡುತ್ತಿದ್ದ. ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಕೆಳಕ್ಕೆ ಬಿದ್ದು ನಾಪತ್ತೆಯಾಗಿದ್ದ.  ತಕ್ಷಣ ವೈರಲೆಸ್ ಮೂಲಕ ಸಂದೇಶ ರವಾನಿಸಿದಾಗ ಬಲೆ ಹಾಕಿ ಜಾಲಾಡಿದ್ದಾರೆ. ಹನುಮಾನ್ ಬೋಟ್ ಮೀನುಗಾರರು ಆಳ ಸಮುದ್ರಕ್ಕೆ ಜಿಗಿದು ಮೃತದೇಹ ಮೇಲಕ್ಕೆ ಎತ್ತಿದ್ದಾರೆ.

ಸದ್ಯ ಮೃತದೇಹವನ್ನ ಭಟ್ಕಳಕ್ಕೆ ರವಾನಿಸಲಾಗಿದೆ. ಮೃತ ಮಾಸ್ತಿ ಗೊಂಡ ಕಳೆದ ಆರೇಳು ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿದ್ದ ಎನ್ನಲಾಗಿದೆ.

ಇದನ್ನು ಓದಿ : ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಪೋಷಕರ ಸಂಭ್ರಮ

ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಕದ್ದು ಎಸ್ಕೇಪ್ ಆಗಲು ವಿಫಲ ಪ್ರಯತ್ನ.

ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್ ಅವರಿಗೆ ಕೊಂಕಣಿ ಕುರೋವ್ ಗೌರವ ಪ್ರಶಸ್ತಿ.

ಉದ್ಯಮಿ ಆರ್ ಎನ್ ನಾಯಕ ಹತ್ಯೆ ಆರೋಪಿ ಬನ್ನಂಜೆ ಸಹಚರ  ಸಾವು.

ಆರೋಗ್ಯಕ್ಕಾಗಿ ಪ್ರಾರ್ಥಿಸಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವರಾಜಕುಮಾರ್ ದಂಪತಿ