ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara  digital news) ಬೆಳಗಾವಿ(Belagavi) : ಭೂಗತ ಪಾತಕಿ ಬನ್ನಂಜೆ ರಾಜಾ ಸಹಚರನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ಕಳೆದ 09 ವರ್ಷಗಳಿಂದ ಹಿಂಡಲಗಾ ಜೈಲಿನಲ್ಲಿರುವ ಕೆ ಎಂ ಇಸ್ಮಾಯಿಲ್ ಸಾವನ್ನಪ್ಪಿದ್ದವ. ಎರಡು ಬಾರಿ ಹೃದಯ ಸಂಬಂಧಿ ಚಿಕಿತ್ಸೆ ಮಾಡಿಕೊಂಡಿರುವ ಇಸ್ಮಾಯಿಲ್, ಏಕಾಏಕಿ ಉಸಿರಾಟದ ಸಮಸ್ಯೆಯಿಂದ ಹಿಂಡಲಗಾ ಜೈಲಿನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಎನ್ನಲಾಗಿದೆ. ತಕ್ಷಣ ಕೂಡಲೇ ಜೈಲಿನಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ  ದಾಖಲಿಸಲಾಗಿತ್ತು. ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಇಸ್ಮಾಯಿಲ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಉದ್ಯಮಿ, ಆರ್ ಎನ್ ನಾಯಕ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.  ಬನ್ನಂಜೆ ರಾಜ ಮತ್ತು ಅವರ ಸಹಚರರ ವಿರುದ್ಧ ರಾಜ್ಯದ ಮೊದಲ ಕೋಕಾ ಪ್ರಕರಣ ದಾಖಲಾಗಿತ್ತು. 2013 ಡಿಸೆಂಬರ್ 21ರಂದು 3ಕೋಟಿ ರೂ ಹಪ್ತಾ ಕ್ಕಾಗಿ ಉದ್ಯಮಿ ಆರ್ ಎನ್ ನಾಯಕ್ ಹತ್ಯೆ ಮಾಡಲಾಗಿತ್ತು.

ಇಸ್ಮಾಯಿಲ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದ. ಕೇರಳದ ಕಾಸರಗೋಡಿನ ನಿವಾಸಿಯಾಗಿದ್ದಾನೆ. ಮೃತದೇಹವನ್ನ   ಬೀಮ್ಸ್ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಆರೋಗ್ಯಕ್ಕಾಗಿ ಪ್ರಾರ್ಥಿಸಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವರಾಜಕುಮಾರ್ ದಂಪತಿ

ಗೋವಾ ಸರಪಂಚನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಾರವಾರದಲ್ಲಿ ಹಗ್ಗ ಕಟ್ಟಿದ ಪೊಲೀಸರು.

ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಮರಗಳ್ಳತನ ಮಾಡಿದ ಹತ್ತು ಜನರು ಹೆಡೆಮುರಿಗೆ.

ನಾಲ್ಕನೇ ಮಹಡಿಯಿಂದ ಜಿಗಿದು ತಂದೆ ಆತ್ಮತ್ಯೆ. ಮೃತದೇಹದ ಮುಂದೆ ಮಕ್ಕಳ ಜಗಳ.

ದಾರಿ ತಪ್ಪಿಸಿದ ಗೂಗಲ್ ಮ್ಯಾಪ್. ರಾತ್ರಿ ಕಾಡಿನಲ್ಲಿ ಕುಟುಂಬ.