ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore): ಹ್ಯಾಟ್ರಿಕ್ ಹೀರೋ ಸ್ಯಾಂಡಲ್‌ವುಡ್ ನಟ(Sandalwood Actor) ಶಿವರಾಜ್‌ಕುಮಾರ್ (Shivarajkumar ) ಅವರು ತಿರುಪತಿಯ ತಿಮ್ಮಪ್ಪನ (Tirupati Timmappa) ದರ್ಶನ ಪಡೆದು ಪತ್ನಿ ಸಮೇತರಾಗಿ ದೇವರಿಗೆ ಮುಡಿ ನೀಡಿದ್ದಾರೆ.
ಪತ್ನಿ ಗೀತಾ, ಪುತ್ರಿ ನಿವೇದಿತಾ ಹಾಗೂ ಆಪ್ತ ಬಳಗದೊಂದಿಗೆ ಭೇಟಿ ನೀಡಿದ್ದಾರೆ. ತಮ್ಮ ಅನಾರೋಗ್ಯ ಕಾರಣದಿಂದ ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಬೇಕಾಗಿದೆ. ಅಮೇರಿಕಾಗೆ (America) ಚಿಕಿತ್ಸೆಗೆ ತೆರಳುವ ಮುಂಚೆ ತಿಮ್ಮಪ್ಪನಿಗೆ ಹರಕೆ ತೀರಿಸಿದ ಶಿವಣ್ಣ ದಂಪತಿ ಅರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಈಗಾಗಲೇ ನಟ ಶಿವರಾಜ್‌ಕುಮಾರ್ (Shivarajakumar) ತಮಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದು ಏನಾಗಿದೆ ಎಂಬ ವಿಚಾರವನ್ನ ಅವರು ಇನ್ನೂ ರಿವೀಲ್ ಮಾಡಿಲ್ಲ. ಈ ನಡುವೆ ಅವರು ಚಿಕಿತ್ಸೆ ಪಡೆಯುವುದಕ್ಕೂ ಮೊದಲು ತಿಮ್ಮಪ್ಪನ ಸನ್ನಿಧಾನದಲ್ಲಿದ್ದು ಆಶೀರ್ವಾದ ಪಡೆದಿದ್ದಾರೆ. ಇವರ ಜೊತೆಗೆ ಇದ್ದ ಆಪ್ತ ಬಳಗದವರು, ಕುಟುಂಬಸ್ಥರು ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಶಿವಣ್ಣ (Shivanna) ಇನ್ನೂ ಕೆಲವು ತಿಂಗಳು ನಟನೆಯಿಂದ ದೂರ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಸಂಪೂರ್ಣ ಚೇತರಿಕೆ ಕಂಡ ಬಳಿಕವೇ ನಟನೆಯತ್ತ ಮತ್ತೆ ಗಮನ ಹರಿಸಲಿದ್ದಾರೆ.
ಇದನ್ನು ಓದಿ : ಗೋವಾ ಸರಪಂಚನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಾರವಾರದಲ್ಲಿ ಹಗ್ಗ ಕಟ್ಟಿದ ಪೊಲೀಸರು.
ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಮರಗಳ್ಳತನ ಮಾಡಿದ ಹತ್ತು ಜನರು ಹೆಡೆಮುರಿಗೆ.
ನಾಲ್ಕನೇ ಮಹಡಿಯಿಂದ ಜಿಗಿದು ತಂದೆ ಆತ್ಮತ್ಯೆ. ಮೃತದೇಹದ ಮುಂದೆ ಮಕ್ಕಳ ಜಗಳ.