ಹೊನ್ನಾವರ(Honnavar) : ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿಯಾದ ಘಟನೆ ತಾಲೂಕಿನ ಮುಗ್ವಾ(Mugva) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಳ್ಳಿ ತಿರುವಿನಲ್ಲಿ (Arolli Cross) ಸಂಭವಿಸಿದೆ.
ಘಟನೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೋಲಾರ(Kolar) ಜಿಲ್ಲೆ ಮಾಲೂರು(Maluru) ತಾಲೂಕು ಮಾಸ್ತಿ ಹಳ್ಳಿಯ (Mastihalli)ಕರ್ನಾಟಕ ಪ್ರೌಢಶಾಲೆ ಮಕ್ಕಳು ಖಾಸಗಿ ವಾಹನದಲ್ಲಿ ಪ್ರವಾಸಕ್ಕೆ ಬಂದಿದ್ದರು. ಜಿಲ್ಲಾ ಪ್ರವಾಸ ಮುಗಿಸಿಕೊಂಡು ಗೋಕರ್ಣದಿಂದ ಪುನಃ ಕೋಲಾರಕ್ಕೆ(Gokarn to Kolara) ಹೋಗುವಾಗ ರಾತ್ರಿ 12 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಮಗುಚಿ ಬಿದ್ದಿದೆಯೆಂದು ತಿಳಿದುಬಂದಿದೆ.
ವಾಹನದಲ್ಲಿ ಒಟ್ಟು 40 ಶಾಲಾ ವಿದ್ಯಾರ್ಥಿಗಳಿದ್ದರು. ಒಟ್ಟು 34 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಅವರನ್ನು ತಕ್ಷಣ ಹೊನ್ನಾವರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗಂಭೀರ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ(Honnavar Police Station) ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನು ಓದಿ : ದಣಿವರಿಯದ, ನೂರಾರು ಜನರಿಗೆ ದಾರಿ ದೀಪವಾದ ಶಿಕ್ಷಕ ನಿಧನ.