ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಂದಾಪುರ (Kundapur) : ಮನೆಯೊಂದರ ಅಂಗಳದಲ್ಲಿ ಚಿರತೆ (Leopard) ಸಂಚಾರ ನಡೆಸಿ ಭಯ ಹುಟ್ಟಿಸಿದ ಘಟನೆ ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ ನಡೆದಿದೆ.
ಚಿರತೆಯ ಸಂಚರಿಸುವ ವಿಡಿಯೋ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕರಿನಕಟ್ಟೆ ರಾಮದಾಸ ಭಂಡಾರಿ ಎಂಬುವರ ಮನೆ ಅಂಗಳದಲ್ಲಿ ಚಿರತೆ ಓಡಾಡಿದ್ದು ಮನೆಯವರು ಕಂಗಲಾಗಿದ್ದಾರೆ.
ಚಿರತೆಯ ಹೆಜ್ಜೆ ಕಂಡ ಗ್ರಾಮದ ನಾಗರಿಕರು ಸಹ ಕತ್ತಲಾಗುತ್ತಿದ್ದಂತೆ ಓಡಾಡಲು ಭಯಪಡುತ್ತಿದ್ದಾರೆ. ಸೂಕ್ತ ಕ್ರಮಕೈಗೊಳ್ಳುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಮೊಳಹಳ್ಳಿ ಶಾಖೆಯ ಅರಣ್ಯಾಧಿಕಾರಿಗಳು ಭೇಟಿದ್ದು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬೋನು ಇರಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಚರಣೆಗೆ ನಡೆಸಿದ್ದಾರೆ.
ಇದನ್ನು ಓದಿ : ಪ್ರವಾಸಕ್ಕೆ ಬಂದಿದ್ದ ಬಾಲಕ ತೆರೆದ ಬಾವಿಯಲ್ಲಿ ಬಿದ್ದು ಸಾವು.
ಸೂರ್ಯಸ್ತದ ನಂತರ ವಿದೇಶಿಗನ ಮಸ್ತಿ. ರಕ್ಷಣೆಗಾಗಿ ಲೈಫ್ ಗಾರ್ಡ್ಸ್ ಸುಸ್ತು.
ಕಾರವಾರದಲ್ಲಿ ಇಂದಿನಿಂದ ಅದ್ದೂರಿಯ ಕಡಲ ಉತ್ಸವ. 21, 22 ರಂದು ಅದ್ಭುತ ಕಾರ್ಯಕ್ರಮ.