ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangaluru) : ತಮ್ಮ ಗ್ರಾಮ್ಯ ಶೈಲಿಯ ಹಾಡು, ಸರಳತೆ ಮೂಲಕ ಪ್ರಸಿದ್ಧಿಯಾಗಿದ್ದ ಹಾವೇರಿಯ ಹನುಮಂತ ಲಮಾಣಿ (Hanumant Lamani) ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್’ 11ನೇ(Bigboss 11) ಆವೃತ್ತಿಯ ರಿಯಾಲಿಟಿ ಶೋನಲ್ಲಿ  ಗೆಲುವು ಸಾಧಿಸಿದ್ದಾರೆ.

ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ಡಿ ಗ್ರಾಮದ ನಿವಾಸಿ ಹನುಮಂತ ಲಮಾಣಿ  ಆನ್‌ಲೈನ್ ಮತದಾನದ ಮೂಲಕ ವೀಕ್ಷಕರಿಂದ 5.23 ಕೋಟಿ ಮತಗಳನ್ನು ಪಡೆದಿರೋದು ವಿಶೇಷ. ಬಿಗ್ ಬಾಸ್ ರಿಯಾಲಿಟಿ ಶೋ(Bigboss reality Show) ಇತಿಹಾಸದಲ್ಲಿಯೇ ಅತ್ಯಧಿಕ ಮತ ಪಡೆದ ಸ್ಪರ್ಧಿ ಎಂಬ ದಾಖಲೆಯನ್ನ ಹನುಮಂತ ಬರೆದಿದ್ದಾರೆ.

ಕಲರ್ಸ್ ಕನ್ನಡ(Colours Kannada) ವಾಹಿನಿಯಲ್ಲಿ 11ನೇ ಆವೃತ್ತಿಯ ಬಿಗ್‌ಬಾಸ್ (Bigboss) ಆರಂಭಗೊಂಡಿದ್ದಾಗ, ಹೊಡೆದಾಟದ ಕಾರಣಕ್ಕೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಿದ್ದರು. ಇದೇ ವೇಳೆಯೇ ಹನುಮಂತ, ವೈಲ್ಡ್ ಕಾರ್ಡ್(Wild Card) ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ತಮ್ಮೂರ ಹುಡುಗ ‘ಬಿಗ್‌ಬಾಸ್‌’ ಶೋನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರು, ಒಂದೆಡೆ ಸೇರಿ ಸಂಭ್ರಮಾಚರಣೆ ಮಾಡಿ ಕುಣಿದು ಕುಪ್ಪಳಿಸಿದರು.

ಚಿಲ್ಲೂರು ಬಡ್ಡಿ ಗ್ರಾಮದ ತಾಂಡಾದ ಮೇಘಪ್ಪ ಹಾಗೂ ತಾಯಿ ಶೀಲವ್ವ ದಂಪತಿ ಪುತ್ರ ಹನುಮಂತ. ಹನುಮಂತ ಅವರ ತಂದೆ  ಕುರಿ ಕಾಯುತ್ತ ಮಗನನ್ನು ಸಾಕಿದ್ದಾರೆ. ಹನುಮಂತ ಅವರಿಗೆ ಅಣ್ಣ, ತಂಗಿ ಹಾಗೂ ಮೂವರು ಅಕ್ಕಂದಿರಿದ್ದಾರೆ.

5ನೇ ತರಗತಿಯವರೆಗೂ ಓದಿರುವ ಹನುಮಂತ, ಬಾಲ್ಯದಲ್ಲಿಯೇ ಭಜನಾ ಪದಗಳನ್ನು ಕೇಳಲು ಹೋಗುತ್ತಿದ್ದರು. ಭಜನಾ(Bhajanas) ಮಂಡಳಿ ಸದಸ್ಯರ ಜೊತೆ ಸೇರಿ ಹಾಡು ಹಾಡಲಾರಂಭಿಸಿದ್ದರು. ದಿನ ಕಳೆದಂತೆ ಶಾಲೆ ಬಿಟ್ಟು, ಹಾಡುವುದನ್ನ ರೂಢಿಸಿಕೊಂಡರು. ದಿನ ಕಳೆದಂತೆ ಶಾಲೆ ಬಿಟ್ಟು, ಹಾಡುಗಾರಿಕೆಯಲ್ಲಿಯೇ ಮುಂದುವರಿದರು. ಇದರ ಜೊತೆಯಲ್ಲಿಯೇ ತಂದೆ-ತಾಯಿ- ಸಹೋದರರೊಂದಿಗೆ ಕುರಿ ಕಾಯಲು ಹೋಗುತ್ತಿದ್ದರು. ಇದರ ನಡುವೆಯೇ ಸವಣೂರು(Savanuru), ಶಿಗ್ಗಾವಿ(Shiggavi) ಹಾಗೂ ಸುತ್ತಮುತ್ತಲ ತಾಲ್ಲೂಕಿನ ಗ್ರಾಮಗಳಲ್ಲಿ ಭಜನಾ ಪದಗಳನ್ನು ಹಾಡುತ್ತ ಪ್ರಸಿದ್ಧಿ ಪಡೆದಿದ್ದರು.

ಕುರಿ ಕಾಯುತ್ತಿದ್ದ ಸಂದರ್ಭದಲ್ಲಿಯೇ ಹಾಡು ಹಾಡಿ ಸಹೋದರನ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಗೆಳೆಯರ ಒತ್ತಾಯದ ಮೇರೆಗೆ ಜೀ ಕನ್ನಡ (Zee Kannada)ವಾಹಿನಿಯ ಸರಿಗಮಪ ಸಂಗೀತ(Sarigamapa Music) ಕಾರ್ಯಕ್ರಮಕ್ಕೆ ಆಡಿಷನ್ ನೀಡಿದ್ದ ಅವರು, ತಮ್ಮ ಕಂಠದ ಮೂಲಕ ಅವಕಾಶ ಗಿಟ್ಟಿಸಿಕೊಂಡರು.

ಕೇಳ ಜಾಣ, ಶಿವ ಧ್ಯಾನ ಮಾಡಣ್ಣ… ನಿನ್ನೊಳಗ ನೀನು ತಿಳಿದ ನೋಡಣ್ಣ…’ ಹಾಡಿನ ಮೂಲಕ ತೀರ್ಪುಗಾರರ ಮನಗೆದ್ದ ಹನುಮಂತ, ಬಳಿಕ ತಿರುಗಿ ನೋಡಲೇ ಇಲ್ಲ. ಹಾಡಿದ ಹಾಡುಗಳೆಲ್ಲವೂ ಪಾಪ್ಯುಲರ್ ಆದವು. ನೃತ್ಯದ ರಿಯಾಲಿಟಿ ಶೋಗಳಲ್ಲಿಯೂ ಹನುಮಂತ ಬೆಳಗಿದರು. ಇದೀಗ ಬಿಗ್ ಬಾಸ್ ಮೂಲಕ ಹನುಮಂತ ಇತಿಹಾಸ ಸೃಷ್ಟಿಸಿದ್ದಾರೆ

ಇದನ್ನು ಓದಿ : ಕೂದಲೆಳೆ ಅಂತರದಲ್ಲಿ ಆರೋಪಿಗಳು ಎಸ್ಕೇಪ್. ಸುಳಿವು ನೀಡಿದವರಿಗೆ ಸಿಗಲಿದೆ 50ಸಾ.ರೂ. ಬಹುಮಾನ.

ಕಿಂಗ್ ಇಸ್ ಬ್ಯಾಕ್. ಬೆಂಗಳೂರಲ್ಲಿ ನಸುನಗುತ್ತಾ ಮಾತನಾಡಿದ ಶಿವಣ್ಣ.

ಹೊನ್ನಾವರದಲ್ಲಿ ಗೋ ಕಟುಕನ ಮೇಲೆ ಪೊಲೀಸ್ ಪೈರಿಂಗ್.

ಮಹಾಕುಂಭಮೇಳದಲ್ಲಿ ಬಾಲಿವುಡ್ ಮಾದಕ ನಟಿಗೆ ಸನ್ಯಾಸ ದೀಕ್ಷೆ.