ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸೌದಿ ಅರೇಬಿಯಾ (Soudi Arebia) :  ಪಶ್ಚಿಮ ವಲಯದ ಜಿಝಾನ್ ಬಳಿ ಸಂಭವಿಸಿದ  ರಸ್ತೆ ಅಪಘಾತದಲ್ಲಿ(Road Accident)  ಒಂಬತ್ತು  ಭಾರತೀಯರು ಧಾರುಣವಾಗಿ ಸಾವನ್ನಪ್ಪಿದ್ದಾರೆ.  ಜಿದ್ದಾದಲ್ಲಿರುವ ಭಾರತೀಯ ರಾಯಭಾರಿ(Indian Embassy) ಕಚೇರಿ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ನೀಡಿದ ಭಾರತೀಯ ರಾಯಭಾರಿ ಕಚೇರಿಯು (Indian Embassy) ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆಂದು ತಿಳಿಸಿದೆ.  ಸ್ಥಳೀಯ ಅಧಿಕಾರಿಗಳು ಮತ್ತು ಸಂತ್ರಸ್ತರ ಸಂಬಂಧಿಕರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದೆ.

ದುರ್ಘಟನೆ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕ‌ರ್ (S Jaishankar) ಪ್ರತಿಕ್ರಿಯಿಸಿದ್ದು, ಈ ಅಪಘಾತ ಮತ್ತು ಜೀವಹಾನಿಯ ಬಗ್ಗೆ ತಿಳಿದು ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪಗಳು. ಜಿದ್ದಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅಧಿಕಾರಿಗಳು ಮತ್ತು ಸಂತ್ರಸ್ತ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಸಹಾಯವಾಣಿ(Helpline) ತೆರೆದಿರೋದಾಗಿ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಶಿರಸಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ. ಆತಂಕಗೊಂಡು ಓಡಿದ ನಾಗರಿಕರು.

ಕುಂಭಮೇಳದಲ್ಲಿ ಇಂದು 10ಕೋಟಿ ಭಕ್ತರ ಸಂಗಮ. ಪ್ರಧಾನಿ ಮೋದಿ ಪ್ರತಿಕ್ರಿಯೆ.

ಪ್ರತಿಷ್ಟಿತ ಬ್ಯಾಂಕ್ ಬುಡಕ್ಕೆ ಕೈ ಹಾಕಿದ ಸೈಬರ್ ಕಳ್ಳರು. ಅಕೌಂಟ್ ಹ್ಯಾಕ್.

ಅಂಕೋಲಾದ ನಿರ್ಜನ ಪ್ರದೇಶದಲ್ಲಿ ಶಂಕಾಸ್ಪದ ಕಾರು. ಕೋಟಿ ರೂ ಪತ್ತೆ.