ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ (Ankola) : ಜನಸಾಮಾನ್ಯರ ಖಾತೆಯಿಂದ ಹಣ ಎಗರಿಸುತ್ತಿದ್ದ ಸೈಬರ್ ಕಳ್ಳರು (Cyber Thieves) ಈಗ ನಾಲ್ಕು ಹೆಜ್ಜೆ ಮುಂದೆ ಹೋಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಅರ್ಬನ್ ಕೋ ಆಪರೇಟಿವ್‌ ಬ್ಯಾಂಕ್ ನ (Ankola Urban Co operative Bank) ಕೇಂದ್ರ ಕಚೇರಿಯ ಅಕೌಂಟ್ ಹ್ಯಾಕ್ (Account Hack) ಮಾಡುವ ಮೂಲಕ ವಂಚಿಸಿದ್ದಾರೆ.

ಆರ್‌ಟಿಜಿಎಸ್ ಮೂಲಕ ಬೇರೆಯವರ ಖಾತೆಗೆ ವರ್ಗಾವಣೆಯಾಗಬೇಕಿದ್ದ   33,42,845 ಲಕ್ಷ ಹಣವನ್ನು ಸೈಬ‌ರ್ ಕಳ್ಳರು ವಂಚಿಸಿದ್ದಾರೆ. ಈ ಬಗ್ಗೆ ಕಾರವಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ (Karwar CEN Police Station) ದೂರು ದಾಖಲಾಗಿದೆ.  ಅಂಕೋಲ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ Ankola Urban Co operative Bank)  ಚೀಫ್ ಎಕ್ಸಿಕ್ಯೂಟಿವ್ ಆಫೀಸ‌ರ್ ರವೀಂದ್ರ ಪಾಂಡುರಂಗ ವೈದ್ಯ ದೂರು ನೀಡಿದ್ದಾರೆ.

ತಮ್ಮ ಅಂಕೋಲಾ(Ankola) ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡ ರಿಂದ ವ್ಯವಸಾಯ ಸೇವಾ ಸಹಕಾರಿ ಸಂಘ ಕ್ಕೆ RTGS ಮಾಡಿದ 5 ಲಕ್ಷ ರೂ., MS ಮೆಂಕಟೇಶ್ವರ ಗ್ಯಾಸ್‌ ಸೆಂಟರ್ ನಿಂದ ಮೆಂಕಟೇಶ್ವರ ಗ್ಯಾಸ್ ಸೆಂಟರ್ ಗೆ RTGS ಮಾಡಿದ 5,46,000 ಲಕ್ಷ, ಜೊತೆಗೆ ಇವರದೇ ಮತ್ತೊಂದು ಖಾತೆಗೆ RTGS ಮಾಡಿದ 6,60,000 ಲಕ್ಷ, ಸವಿತಾ ವೆಂಕಟರಮಣ  TAFE ACCESS LTD ಗೆ RTGS 16,36,895 ರೂ. ಸೇರಿ ಒಟ್ಟು  33,42,895 ಲಕ್ಷ ಹಣವು RTGS ಮಾಡಿದ ಖಾತೆಗೆ ಹೋಗದೇ ಹ್ಯಾಕ್ ಆಗಿದ್ದು ಸೈಬರ್ ಕಳ್ಳರ ಖಾತೆಗೆ ಜಮಾ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜನವರಿ 24 ರಿಂದ 27 ರ ನಡುವೆ ಈ ಘಟನೆ ನಡೆದಿದ್ದು
ಯಾರ ಖಾತೆಗೆ ಜಮಾ ಆಗಿದೆ ಎಂದು ಈವರೆಗೂ ಮಾಹಿತಿ ತಿಳಿದಿಲ್ಲ ಎಂದು ತಮ್ಮ ದೂರಿನಲ್ಲಿ ರವೀಂದ್ರ ಪಾಂಡುರಂಗ ವೈದ್ಯ ತಿಳಿಸಿದ್ದಾರೆ.

ಇದನ್ನು ಓದಿ : ಅಂಕೋಲಾದ ನಿರ್ಜನ ಪ್ರದೇಶದಲ್ಲಿ ಶಂಕಾಸ್ಪದ ಕಾರು. ಕೋಟಿ ರೂ ಪತ್ತೆ.

ನಿಜಶರಣ ಅಂಬಿಗರ ಚೌಡಯ್ಯ ವೃತ್ತಕ್ಕೆ ಎಂಎಲ್ಸಿ ಗಣಪತಿ ಉಳ್ವೆಕರ್ ಮನವಿ.

ನೃತ್ಯಕ್ಕೂ ಸೈ, ಓದಿಗೂ ಜೈ. ಸಾಧನೆಯ ಶಿಖರದ ಶಿರಾಲಿಯ ಧನಲಕ್ಷ್ಮೀ ಮೊಗೇರಗೆ ವಿಧುಷಿ ಪಟ್ಟ.

ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ  ಭೇದಿಸಿದ ರೋಚಕ ಕಥೆ

ಯುವಕನ ಮುಗಿಸಿದ ಮೂವರಿಗೆ ಗುಂಡಿನ ಎಚ್ಚರ ನೀಡಿದ ಪೊಲೀಸರು.