ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಚೀನಾ (Cheena):  ಚೀನಾದ ಮೃಗಾಲಯವೊಂದು(cheena zoo)  ಹುಲಿ ಮೂತ್ರವನ್ನು (Tiger Urine) ಮಾರಾಟ ಮಾಡಿ ಹಣ ಗಳಿಸುತ್ತಿದೆ. ಹುಲಿ ಮೂತ್ರದಿಂದ ವಿವಿಧ ಅಂಗಾಂಗಗಳಿಗೆ ರಾಮ ಬಾಣ ಎಂದು ಹೇಳಲಾಗುತ್ತಿದೆ.

600ರೂಪಾಯಿಗೆ 250 ಎಂ.ಎಲ್ ಹುಲಿ ಮೂತ್ರವನ್ನು(Tiger Urine) ಮಾರಾಟ ಮಾಡಲಾಗುತ್ತಿದೆ. ಉಳುಕು, ಸ್ನಾಯು ನೋವು, ಸಂಧಿವಾತಕ್ಕೆ ಔಷಧಿಯೆಂದು ಹೇಳಲಾಗುತ್ತಿದ್ದು,  ಈ ಸುದ್ದಿ ಬಾರೀ ವೈರಲ್ ಆಗುತ್ತಿದೆ. ಆದರೆ  ಹುಲಿ ಮೂತ್ರದಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂಬುದನ್ನು ತಜ್ಞರು ಖಚಿತಪಡಿಸಿದ್ದಾರೆ.

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಯಾನ್ ಬಿಫೆಂಡ್ಮಿಯಾ ವನ್ಯಜೀವಿ ಮೃಗಾಲಯ(Wildlife Zoo) 250 ಎಂ.ಎಲ್ ಸೈಬೀರಿಯನ್ ಹುಲಿ ಮೂತ್ರವನ್ನು ಸುಮಾರು 50 ಯುವಾನ್‌ಗೆ ಅಂದರೆ 600 ರೂ.ಗಳಿಗೆ ಮಾರಾಟ ಮಾಡುತ್ತಿದೆ. ಹುಲಿ ಮೂತ್ರ ತುಂಬಿದ ಬಾಟಲಿಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Media) ಪೋಸ್ಟ್ ಮಾಡುವ ಮೂಲಕ ಪ್ರವಾಸಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಚೀನಾದ ಸಿಚುವಾನ್ ಪ್ರಾಂತ್ಯದ ಮೃಗಾಲಯವೊಂದು ಸೈಬೀರಿಯನ್ ಹುಲಿ ಮೂತ್ರವನ್ನು ಬಾಟಲಿಗಳಲ್ಲಿ ಮಾರುತ್ತಿವೆ. ಹುಲಿ ಮೂತ್ರ ಸ್ನಾಯು ನೋವು, ದೀರ್ಘಕಾಲದ ಸಂಧಿವಾತ ಮತ್ತು ಉಳುಕುಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ನೋವಿರುವ ಜಾಗಕ್ಕೆ ಹುಲಿಯ ಮೂತ್ರವನ್ನು ವೈಟ್ ವೈನ್‌ನಲ್ಲಿ (White Wine) ಅದ್ದಿದ ಶುಂಠಿಯ(Ginger) ಸಹಾಯದಿಂದ ಲೇಪಿಸಿ ಎಂದು ಹುಲಿ ಮೂತ್ರ ಬಾಟಲಿಗಳ ಮೇಲೆ ಬರೆಯಲಾಗಿದೆ. ಅಲ್ಲದೆ ಇದನ್ನು ಬೇಕಾದರೆ ಕುಡಿಯಲುಬಹುದು ಎಂದು ಮೃಗಾಲಯದಲ್ಲಿ  ಔಷಧಿಯನ್ನು ತಯಾರಿಸಿದವರು ಹೇಳಿದ್ದಾರಂತೆ.

ಇದನ್ನು ಓದಿ : ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ. ಒಂಬತ್ತು ಭಾರತೀಯರ ದುರ್ಮರಣ.

ಶಿರಸಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ. ಆತಂಕಗೊಂಡು ಓಡಿದ ನಾಗರಿಕರು.

ಕುಂಭಮೇಳದಲ್ಲಿ ಇಂದು 10ಕೋಟಿ ಭಕ್ತರ ಸಂಗಮ. ಪ್ರಧಾನಿ ಮೋದಿ ಪ್ರತಿಕ್ರಿಯೆ.

ಪ್ರತಿಷ್ಟಿತ ಬ್ಯಾಂಕ್ ಬುಡಕ್ಕೆ ಕೈ ಹಾಕಿದ ಸೈಬರ್ ಕಳ್ಳರು. ಅಕೌಂಟ್ ಹ್ಯಾಕ್.