ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)  ಮುಂಡಗೋಡ(Mundagodu) : ಆಟವಾಡುತ್ತಿದ್ದ ಮಕ್ಕಳ ಮೇಲೆ ಶ್ವಾನ ದಾಳಿ (Dog Attack) ಮಾಡಿದ ಘಟನೆ ಮುಂಡಗೋಡು ಪಟ್ಟಣದಲ್ಲಿ ನಡೆದಿದೆ.

ಮನೆಯ ಆವರಣದಲ್ಲಿ ಆಟವಾಡುವಾಗ ಮೂವರು ಮಕ್ಕಳಿಗೆ  ಹುಚ್ಚುನಾಯಿ  ಕಚ್ಚಿ ಗಾಯಗೊಳಿಸಿದೆ. ಪಟ್ಟಣದ  ಕಿಲ್ಲೇ ಓಣಿಯ (Killeoni) ಸಮೀರ ನಿಗೋಣಿ ಎಂಬುವರ ಆರು ವರ್ಷದ ಮಗ, ಲಮಾಣಿ ತಾಂಡಾದ ನಾಲ್ಕು ವರ್ಷದ ಮಗ  ಹಾಗೂ ಕಿಲ್ಲೇ ಓಣಿಯ  ಬಾಲಕನ ಮೇಲೆ ಹುಚ್ಚುನಾಯಿ ದಾಳಿ ಮಾಡಿದೆ.

ನಾಯಿ ದಾಳಿಯಿಂದ ಗಾಯಗೊಂಡವರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಸಲಹೆಯಂತೆ ಇಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (Hubli Kims Hospital) ದಾಖಲಿಸಲಾಗಿದೆ.

ಪಟ್ಟಣ ಪಂಚಾಯತ್  ಬೀದಿನಾಯಿಗಳನ್ನು ಹಾಗೂ ಹುಚ್ಚು ಹಿಡಿದ ನಾಯಿಗಳನ್ನು ಸ್ಥಳಾಂತರ ಮಾಡಬೇಕೆಂದು ಪಾಲಕರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಮತ್ತೆ ಶ್ವಾನ ದಾಳಿಗೆ ಸಾರ್ವಜನಿಕರು ತೊಂದರೆ ಎದುರಿಸಬೇಕಾಗಬಹುದು.

ಇದನ್ನು ಓದಿ : ಭಟ್ಕಳದಲ್ಲಿ ಲಾರಿ ಪಲ್ಟಿ. ಹೆದ್ದಾರಿ ಪಾಲಾದ ಸ್ಪೀರಿಟ್.

ಕುಂಭಮೇಳಕ್ಕೆ ತೆರಳುವ ವೇಳೆ ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತ. 18 ಜನರ ದುರ್ಮರಣ.