ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bengaluru) : ಸೊಸೆ ಓರ್ವಳು ತನ್ನ ಅತ್ತೆಯನ್ನ ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಬೇಕೆಂದು ಬೇಡಿದ ಆಘಾತಕಾರಿ ಘಟನೆ (Shocking News) ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಸಂಜಯ್ ನಗರದಲ್ಲಿರುವ ಸುನೀಲಕುಮಾರ್ ಎನ್ನುವ ವೈದ್ಯರೊಬ್ಬರಿಗೆ ಮೆಸೇಜ್ ಮಾಡಿದ ಮಹಿಳೆ ಅತ್ತೆಯನ್ನು ಕೊಲ್ಲಲು ಮಾತ್ರೆ(Tablets) ಬರೆದುಕೊಡಿ ಎಂದು ಕೇಳಿರುವುದಕ್ಕೆ ಸ್ವತಃ ವೈದ್ಯರೆ ಶಾಕ್ ಆಗಿದ್ದಾರೆ.
ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮಾಡಿ ಮಹಿಳೆ ಕೇಳಿದ್ದಾರೆ. ಈ ಸಂದೇಶ ನೋಡಿ ಆಘಾತಕ್ಕೆ ಒಳಗಾದ ವೈದ್ಯ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಮಹಿಳೆ ವೈದ್ಯರನ್ನ ಸಂಪರ್ಕಿಸಬೇಕು ಎಂದಾಗ ಯಾಕೆ ಎಂದು ಪ್ರಶ್ನಿಸಿದ್ದಾರೆ. ಆಗ ಮಹಿಳೆ ನಾನು ಹೇಳಿದರೆ ನೀವು ಬೈಯ್ಯುತ್ತಿರಾ ಎಂದು ಪ್ರತಿಕ್ರಿಯಿಸಿದ್ದಾರೆ. ಅಂದರೆ ಎಂದು ಮರು ಪ್ರಶ್ನಿಸಿದಾಗ ನಾನು ಹೇಳುವ ವಿಷಯ ಕೇಳಿ ನೀವು ಬೈಯ್ಯಬಹುದು ಎಂದು ಹೇಳಿದ್ದಾಳೆ.
ಪರ್ವಾಗಿಲ್ಲ ಹೇಳಿ ಎಂದು ವೈದ್ಯರು ಹೇಳಿದಾಗ ಕೊಲ್ಲಲು ಎಂದು ಹೇಳಿದ್ದಾರೆ. ಯಾರನ್ನ ಅಂದರೆ ಅತ್ತೆನ ಎಂದು ಮರು ಉತ್ತರ ನೀಡಿದ್ದಾರೆ. ಯಾಕೆ ಅಂದರೆ ಆಕೆ ತುಂಬಾ ಕಾಟ ಕೊಡ್ತಾರೆ ಎಂದು ಮಹಿಳೆ ಸಂದೇಶ ಕಳುಹಿಸಿದ್ದಾರೆ.
ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್ ಬ್ಲಾಕ್ ಮಾಡಿದ್ದಾರೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ (Sanjayanagara police) ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಅಸಲಿ ಸತ್ಯ ಏನೆಂಬುದು ಗೊತ್ತಾಗಲಿದೆ.
ಇದನ್ನು ಓದಿ : ಮುಡಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ. ಸಿಎಂ ಮತ್ತು ಪತ್ನಿ ಬಚಾವ್.
ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಲಾರಿ. ಮೂವರ ದುರ್ಮರಣ
ಪ್ರೇಮಿಗಳಿಗೆ ನಿವೇದಿಸಿ ನೇಣಿಗೆ ಕೊರಳೊಡ್ಡಿದ ಯುವಕ. ಅಂಕೋಲಾದಲ್ಲೊಂದು ಹೃದಯವಿದ್ರಾವಕ ಘಟನೆ.
	
						
							
			
			
			
			
