ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangaluru): ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ರನ್ಯಾ ಬಂಧಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ನಟಿ ರನ್ಯಾ ಬರೋಬ್ಬರಿ 14.8 ಕೆ.ಜಿ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ನಟಿಯನ್ನು ನಾಗವಾರದ ಡಿಆರ್ಐ ಕಚೇರಿಗೆ ಕರೆದುಕೊಂಡು ಹೋಗಿ ತೀವ್ರ ವಿಚಾರಣೆ ನಡೆಸಲಾಗಿದೆ.
ದುಬೈಗೆ ಹೋಗಿ ವ್ಯಾಪಾರ ಮಾಡ್ತೀನಿ ಎಂದು ಹೇಳಿದ್ದ ರನ್ಯಾ ರಾವ್ ಕುರಿತು ದೆಹಲಿ ಡಿಆರ್ಐ ಟೀಮ್ಗೆ ಖಚಿತವಾದ ಮಾಹಿತಿ ಲಭಿಸಿತ್ತು. ನಿನ್ನೆ ಆಕೆ ಬರೋದಕ್ಕೂ 2 ಗಂಟೆ ಮೊದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಹಾಗೂ ಪೊಲೀಸರು ಅಲರ್ಟ್ ಆಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು.
ದುಬೈನಿಂದ ಎಮಿರೈಟ್ಸ್ ಫೈಟ್ನಲ್ಲಿ ನಟಿ ರನ್ಯಾ ರಾವ್ KIAL ವಿಮಾನ ನಿಲ್ದಾಣಕ್ಕೆ ಬಂದರು. 14.8 ಕೆ.ಜಿ ಚಿನ್ನದೊಂದಿಗೆ ಏರ್ಪೋರ್ಟ್ಗೆ ಬಂದಿಳಿದ ನಟಿ ರನ್ಯಾ ತನ್ನ ದೇಹದ ಒಳಗೆ ಚಿನ್ನದ ಬಿಲ್ಲೆಗಳನ್ನ ಇಟ್ಟುಕೊಂಡು ಸಾಗಾಟ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಲ್ಯಾಂಡ್ ಆಗ್ತಿದ್ದಂತೆ ನಿನ್ನೆ ಸಂಜೆ 7:30ರ ಸುಮಾರಿಗೆ ಏರ್ ಪೋರ್ಟ್ನಲ್ಲಿ DRI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂದು ವಿಚಾರಣೆಯ ಬಳಿಕ ನಟಿ ರನ್ಯಾ ರಾವ್ ಅವರನ್ನು CCH 82 ಕೋರ್ಟ್ಗೆ ಹಾಜರು ಪಡಿಸಲಾಗಿದೆ.
ಇದನ್ನು ಓದಿ : ಕ್ಯಾಂಪ್ ನಲ್ಲಿದ್ದ ವಿದ್ಯಾರ್ಥಿನಿ ಆಕಸ್ಮಿಕವಾಗಿ ಸಾವು.
ಬಂದರು ಯೋಜನೆ ಮೀನುಗಾರರ ಹೊಟ್ಟೆ ಬರಿದಾಗಿಸುವ ಪ್ರಯತ್ನ: ದಿಲೀಪ್ ಅರ್ಗೇಕರ್