ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ರಾಜ್ಯ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ ಸೋಮವಾರ ಕಾರವಾರದಲ್ಲಿ ಜಿಲ್ಲಾ ಬಿಜೆಪಿಯಿಂದ  ಪ್ರತಿಭಟನೆ (Bjp Protest) ನಡೆಯಿತು.

ನಗರದ ಶಿವಾಜಿ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಮಾನವ ಸರಪಳಿ ರಚಿಸುವ ಮೂಲಕ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಮಾತನಾಡಿ, ಸ್ವಾತಂತ್ರ್ಯ ಬಂದಾಗಿಂದ ಕಾಂಗ್ರೆಸ್ ಸರಕಾರ ತುಷ್ಟಿಕರಣ ಮಾಡುತ್ತಿದೆ. ಈ ಬಾರೀ ಮಂಡಿಸಿದ ಬಜೆಟ್ ನಲ್ಲಿ ಒಂದೇ ಸಮುದಾಯದ ಓಲೈಕೆ ಮಾಡಿದೆ. ಮುಸ್ಲಿಂ ಸಮುದಾಯ ಗುತ್ತಿಗದಾರರಿಗೆ ಶೇ 4 ಮೀಸಲಾತಿ ನೀಡುತ್ತಿರುವುದು ಖಂಡನಿಯ ಎಂದರು.

ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಸುಳ್ಳು ಆರೋಪದಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತದೆ. ರೈತರ, ಸಂವಿಧಾನ ವಿರೋಧಿ ಎಂದರೆ ಕಾಂಗ್ರೆಸ್ ಸರಕಾರ ಮಾತ್ರ ಎಂದು ಜರಿದರು.

ಮುಖಂಡರಾದ ನಾಗರಾಜ ನಾಯಕ ಮಾತನಾಡುತ್ತ, ಹನಿ ಟ್ರ್ಯಾಪ್ ವಿಚಾರದಲ್ಲಿ ಆಡಳಿತ ಪಕ್ಷದ ಮಂತ್ರಿ ಸಿಲುಕಿದದ್ದಾರೆ.  75 ವರ್ಷದವರನ್ನ ಬಿಡದ ಹನಿ 25 ವರ್ಷದ ಯುವಕರನ್ನು ಬಿಡುತ್ತದೆಯೇ ಎಂದರು.

ಮುಖಂಡ ರಾಜೇಂದ್ರ ನಾಯ್ಕ ಮಾತನಾಡುತ್ತ, ವಿರೋಧ ಪಕ್ಷದ ನಾಯಕರು ಭಾರತ ಮಾತೆ ಎಂದರೆ ಯಾರು ಎನ್ನುತ್ತಾರೆ. ಅವರಿಗೆ ಭಾರತ ಪರ ಘೋಷಣೆ ಕೂಗಿದರೆ ಕೋಪ ಬರುತ್ತೆ. ಇದು ಕಾಂಗ್ರೆಸ್ ಆಡಳಿತ ಎಂದು ಲೇವಡಿ ಮಾಡಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈಚೆಗೆ ಮಂಡಿಸಿದ ಬಜೆಟ್ ನಲ್ಲಿ ಜಿಲ್ಲೆಗೆ ಯಾವುದೇ ಅನುದಾನ  ನೀಡಿಲ್ಲ.  ಅನೇಕ ಯೋಜನೆಗಳು ನಿಂತಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಧ್ವನಿ ಇಲ್ಲ. ಜಿಲ್ಲೆಯಲ್ಲಿ ಸಂಪದ್ಭರಿತವಾದ ಅರಣ್ಯ ಇದ್ದು ಸಾವಿರಾರು ಕೋಟಿ ರಾಜ್ಯದ ಬೊಕ್ಕಸಕ್ಕೆ ಹೋಗುತ್ತದೆ. ಆದರೆ ಕಾಂಗ್ರೇಸ ಶಾಸಕರು ಪಾಲು ಕೇಳಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಡಿಸಿಎಂ ಡಿ ಕೆ ಶಿವಕಮಾರ ಅವರು ದೆಹಲಿಗೆ ಭೇಟಿ ನೀಡಿ  ಕಾಯ್ದೆ ತಿದ್ದುಪಡಿ ಮಾಡಿ ಮುಸ್ಲಿಂರಿಗೆ ಮೀಸಲಾತಿ ನೀಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಖಂಡಿಸುತ್ತೇವೆಂದರು.

ಬಳಿಕ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪ್ರಶಾಂತ ನಾಯ್ಕ, ಗೋವಿಂದ ನಾಯ್ಕ,  ಶ್ರೀಕಾಂತ್ ನಾಯ್ಕ  ಭಟ್ಕಳ,  ರವಿರಾಜ ಅಂಕೋಲೇಕರ್, ಸಂಜಯ್ ಸಾಳುಂಕೆ, ದೇವಿದಾಸ್ ನಾಯ್ಕ, ಸುನೀಲ್ ಸೋನಿ ಸೇರಿದಂತೆ ಇತರರು  ಪಾಲ್ಗೊಂಡಿದ್ದರು.

ಇದನ್ನು ಓದಿ: ಮೀನು ಕಚ್ಚಿದ ಪರಿಣಾಮ ಕೈ ಕಳೆದುಕೊಂಡ ವ್ಯಕ್ತಿ.

ಮಾದರಿಯಾದ ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ನಡೆದ  ಇಫ್ತಾರ್ ಸಂಗಮ

“ನೀರು ನೀಡಿ-ಜೀವ ಉಳಿಸಿ” ಅಭಿಯಾನ. ಬಹುಮಾನದ ಮೂಲಕ ಉತ್ತೇಜನ.

ನೆನೆದವರ ಮನದ ಕಾಪ್ರಿ ದೇವರ ಜಾತ್ರೆಗೆ ಭಕ್ತ ಸಾಗರ.