ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಖ್ಯಾತ ಅರ್ಥಶಾಸ್ತ್ರಜ್ಞ, ಉದಾರೀಕರಣದ ಹರಿಕಾರ, ದೇಶದ ಅತ್ಯಂತ ಮೇಧಾವಿ ಪ್ರಧಾನಿ ಎಂಬ ಖ್ಯಾತಿ ಪಡೆದಿದ್ದ ಡಾ ಮನಮೋಹನ್ ಸಿಂಗ್ ಅವರ ಹೆಸರಿನ ಶಾಲೆ ಪಾಕಿಸ್ತಾನದಲ್ಲಿದೆ.
ಮನಮೋಹನ್ ಅವರು ತಮ್ಮ 92ನೇ ವಯಸ್ಸಿನಲ್ಲಿ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. 1932, ಸೆಪ್ಟೆಂಬರ್ 26 ರಂದು ಅವರು ಜನಿಸಿದ್ದರು. ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್ನ ಗಾವ್ ಎಂಬ ಹಳ್ಳಿ ಇವರ ಮೂಲವಾಗಿದೆ. ತಂದೆ ಗುರುಮುಖ್ ಸಿಂಗ್ ಮತ್ತು ತಾಯಿ ಅಮೃತ್ ಕೌರ್. ಬಾಲ್ಯದಲ್ಲಿರುವಾಗಲೇ ಸಿಂಗ್ ತಮ್ಮ ತಾಯಿಯನ್ನು ಕಳೆದುಕೊಂಡರು. ನಂತರ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ದೇಶ ವಿಭಜನೆಯ ಬಳಿಕ ಮನಮೋಹನ್ ಸಿಂಗ್ ಕುಟುಂಬವು ಅಮೃತಸರಕ್ಕೆ ವಲಸೆ ಬಂದಿತು.
ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ಮನಮೋಹನ್ ಸಿಂಗ್ ಹೆಸರಲ್ಲಿ ಶಾಲೆಯೊಂದು ಇದೆ. ಸಿಂಗ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಮುಗಿಸಿದ್ದರು. ಹೀಗಾಗಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಹುಟ್ಟೂರಲ್ಲಿ ಸಂಭ್ರಮದ ಮನೆ ಮಾಡಿತ್ತು. ಅಲ್ಲಿನ ಪಂಜಾಬ್ ಪ್ರಾಂತ್ಯದ ಸರ್ಕಾರ 2007ರಲ್ಲಿ ಸಿಂಗ್ ಅವರ ಗೌರವಾರ್ಥವಾಗಿ ಗಾಹ್ ಗ್ರಾಮದಲ್ಲಿರುವ ಬಾಲಕರ ಶಾಲೆಗೆ ಮನಮೋಹನ್ ಸಿಂಗ್ ಬಾಲಕರ ಶಾಲೆ ಎಂದು ನಾಮಕರಣ ಮಾಡಿದೆ. ಇಂದಿಗೂ ಶಾಲೆ ಇದೆ.
ಇದನ್ನು ಓದಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ. ಇಂದು ಸರ್ಕಾರಿ ರಜೆ ಘೋಷಣೆ.