ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹಳಿಯಾಳ(Haliyal): ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಲ್ಲತ್ ಗ್ಯಾಂಗ್ ವೊಂದನ್ನ ಬಂಧಿಸುವಲ್ಲಿ (Gang Arrest) ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗ್ಯಾಂಗ್ ಸದಸ್ಯರು ಪೊಲೀಸರಿಗೆ ಹಲ್ಲೆ ಮಾಡಿ ಎಸ್ಕೇಪ್ ಆಗುವ ವೇಳೆ ಪೊಲೀಸರ ಪೈರಿಂಗ್ ಎದುರಿಸಬೇಕಾದ ಘಟನೆ ನಡೆದಿದೆ. ತಲ್ಲತ್ ತಂಗಲ್, ಮಂಗಳೂರು, (41) ಸಾ:ಬಜಾಲ್ ನಂತೂರು, ಮಂಗಳೂರು, ಎಂ ಬಿ ನೌಪಲಾ (33) ಸಾ: ಕಣ್ಣುರ, ಮಂಗಳೂರು ಮತ್ತು ಮೊಹಮ್ಮದ ಸಾಹಿಲ್ ಮೊಹಮ್ಮದ ಇಬ್ರಾಹಿಂ, ಸಾ: ಮಂಗಳೂರು ಇವರು ರೌಡಿಶೀಟರ್ ಆಗಿದ್ದು, ರಾಜ್ಯಾದ್ಯಂತ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಬೆಳಗಾವಿಯ ವಂಟಮೂರಿ ಘಾಟ(Vantamuri Ghat) ಹತ್ತಿರ ದಸ್ತಗಿರಿ ಮಾಡಿ, ಅಲ್ಲಿಂದ ಅಂಕೋಲಾಕ್ಕೆ ಆರೋಪಿ ಮೊಹಮ್ಮದ ಸಾಹಿಲ್ ಹಾಗೂ ಸಿಬ್ಬಂದಿಗಳಾದ ಶ್ರೀಕಾಂತ ಮತ್ತು ಮಂಜುನಾಥ ಅವರು ಕಾರಿನಲ್ಲಿ ಆರೋಪಿತರಾದ ತಲ್ಲತ್ ತಂಗಲ್, ಎಂ ಬಿ ನೌಪಲ ನನ್ನ ಪಿ ಎಸ್ ಐ ಗಳಾದ ಉದ್ದಪ್ಪ ಧರೇಪ್ಪನವರ, ಪರಶುರಾಮ ಮಿರ್ಜಿಗಿ, ಸಿಹೆಚಸಿ ಬಸವರಾಜ ಹಗರಿ ಮತ್ತು ಕೊಟೇಶ್ ರವರು ಹಳಿಯಾಳ ಮೂಲಕ ಕರೆದುಕೊಂಡು ಬರುತ್ತಿದ್ದರು. ತಟ್ಟಿಗೇರಾ ಕ್ರಾಸ್ ಹತ್ತಿರ ಮೂತ್ರ ವಿಸರ್ಜನೆಗಾಗಿ ಗಾಡಿ ನಿಲ್ಲಿಸಿದ ಸಂದರ್ಭದಲ್ಲಿ ಆರೋಪಿಗಳು, ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಅಲ್ಲಿದ್ದ ಕಲ್ಲಿನಿಂದ ಹೊಡೆದು ತಪ್ಪಿಸಿಕೊಂಡು ಹೋಗುತ್ತಿದ್ದರು. ಪಿ ಎಸ್ ಐ ಗಳಾದ ಉದ್ದಪ್ಪ ಹಾಗೂ ಪರಶುರಾಮ ರವರು ಓಡಬೇಡಿ ಸರೆಂಡರ್ ಆಗಿ ಅಂತಾ ಹೇಳಿದರೂ, ಅಲ್ಲಿರುವ ಗಾಜಿನ ಬಾಟಲಿ ಒಡೆದು ಅದರಿಂದ ಹಲ್ಲೆ ಮಾಡಿದಾಗ ಉದ್ದಪ್ಪ ಧರೆಪ್ಪನವರ, ಪರಶುರಾಮ ಮಿರ್ಜಿಗಿ ರವರು ತಮ್ಮ ಬಳಿ ಇದ್ದ ಸರ್ವಿಸ್ ಪಿಸ್ತೂಲ್ಲಿಂದ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ನಂತರ ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಆರೋಪಿ ತಲ್ಲತ್ ತಂಗಲ್, ಉದ್ದಪ್ಪ ಧರೆಪ್ಪನವರ ಹತ್ತಿರ, ಆರೋಪಿ ಎ ನೌಪಲಾ, ಪರಶುರಾಮ ಮಿರ್ಜಗಿ ಹತ್ತಿರ ಬಂದಾಗ ತಮ್ಮ ಆತ್ಮರಕ್ಷಣೆಗಾಗಿ ಪಿಸ್ತೂಲಿನಿಂದ ಕ್ರಮವಾಗಿ ಆರೋಪಿ ತಲ್ಲತ್ ತಂಗಲ್, ಮಂಗಳೂರು ಇತನ ಎಡಕಾಲಿನ ಮಂಡಿ ಕೆಳಗೆ ಹಾಗೂ ಆರೋಪಿ ಎಂ ಬಿ ನೌಪಲಾ ಇತನ ಎಡಗಾಲಿನ ಮಂಡಿ ಕೆಳಗೆ ಗುಂಡು ಹಾರಿಸಿರುತ್ತಾರೆ.
ಪಿ ಎಸ್ ಐ ಗಳಾದ ಉದ್ದಪ್ಪ ಧರೆಪ್ಪನವರ, ಪರಶುರಾಮ ಮಿರ್ಜಿಗಿ, ಯಲ್ಲಾಪುರ ಪೊಲೀಸ್ ಠಾಣೆಯ ಬಸವರಾಜ ಹಗರಿ, ಮುಂಡಗೋಡು ಪೊಲೀಸ್ ಠಾಣೆಯ ಕೋಟೇಶ್ ನಾಗರವಳ್ಳಿ ಗಾಯವಾಗಿದೆ.
ಗಾಯಗೊಂಡ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಹಳಿಯಾಳದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗುಂಡು ತಗುಲಿದ ಆರೋಪಿಗಳಿಬ್ಬರಿಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಪೊಲೀಸರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದದಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದರಿಂದ ಆರೋಪಿಗಳ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ನಾರಾಯಣ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಳಿಯಾಳದ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಭೇಟಿ ನೀಡಿ ಗಾಯಗೊಂಡ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿದರು.
ದರೋಡೆ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಮೆಚ್ಚಿ ಅಭಿನಂದಿಸಿ, ಬಹುಮಾನ ಘೋಷಿಸಲಾಗಿದೆ.
ಇದನ್ನು ಓದಿ : ಹೆಂಡತಿ ಹೊಡಿತಾಳೆ, ಪ್ಲೀಸ್ ಕಾಪಾಡಿ. ರೈಲ್ವೆ ಉದ್ಯೋಗಿ ಗೋಳು.