ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ನವದೆಹಲಿ (Newdelhi): ಕದನ ವಿರಾಮಕ್ಕೆ ಸಮ್ಮತಿ ವ್ಯಕ್ತವಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿದೆ(Ceasefire).
ಜಮ್ಮು ಮತ್ತು ಕಾಶ್ಮೀರದ (Jammu Kashmir) ಅಖ್ನೂರ್, ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್, ಗುಜರಾತಿನ ಕಚ್ ಮತ್ತಿತರ ಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಹಾರಾಡುತ್ತಿರುವ ದೃಶ್ಯಗಳು ಗೋಚರಿಸುತ್ತಲೇ ಇದೆ.
ಪಾಕಿಸ್ತಾನ(Pakistan) ನಡೆಸುತ್ತಿರುವ ಭಯೋತ್ಪಾದನೆಯ ವಿರುದ್ಧ ಭಾರತ ಆಪರೇಷನ್ ಸಿಂಧೂರ್(Operation Sindur) ಕಾರ್ಯಾಚರಣೆ ಆರಂಭಿಸಿತ್ತು. ಹೀಗಾಗಿ ಪಾಪಿ ಪಾಕಿಸ್ತಾನ ಅಮಾಯಕರ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿದೆ. ನಿನ್ನೆಯಷ್ಟೇ ವಿಶ್ವದ ದೊಡ್ಡಣ್ಣ ಅಮೆರಿಕ(America) ಮಧ್ಯಸ್ಥಿಕೆಯಲ್ಲಿ ಮೇ 10 ರಂದು ಕದನ ವಿರಾಮ ಘೋಷಣೆ ಎಂದಿತು. ತನ್ನ ಬೆನ್ನನ್ನ ತಾನು ತಟ್ಟಿಕೊಂಡ ವಿಶ್ವದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿಕೆ ಈಗ ವಿಶ್ವದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.
ಮುಗ್ಧ ಜನರ ಪ್ರಾಣ ಹಾಗೂ ಅಪಾರ ನಾಶಕ್ಕೆ ಕಾರಣವಾಗಬಹುದಾದ ಯುದ್ಧ ನಿಲ್ಲಿಸಿದ ಭಾರತ ಹಾಗೂ ಪಾಕಿಸ್ತಾನದ ಗಟ್ಟಿ ನಾಯಕತ್ವಕ್ಕೆ, ಶಕ್ತಿ, ಬುದ್ಧಿವಂತಿಕೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದ ಟ್ರಂಪ್ (Trump) ಉಭಯ ದೇಶಗಳ ಧೈರ್ಯದ ನಿರ್ಧಾರಕ್ಕೆ ತ ಹಲವರ ಜೀವ ಉಳಿದಿದೆ ಎಂದಿದ್ದರು.
ಯಾವುದೇ ಚರ್ಚೆ ಇಲ್ಲದೆ ಮುಂದೆ ಎರಡೂ ದೇಶಗಳ ಜೊತೆ ವ್ಯಾಪಾರ ವಹಿವಾಟು ಹೆಚ್ಚಿಸಲಿದ್ದೇನೆ. ಕಾಶ್ಮೀರದ ಕುರಿತು ಸಾವಿರ ವರ್ಷದ ನಂತರ ಆದ್ರೂ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾ ಎಂದು ಇಬ್ಬರ ಜೊತೆಗೂ ಸೇರಿ ಕೆಲಸ ಮಾಡಿ ನೋಡಲಿದ್ದೇನೆ. ಎರಡೂ ದೇಶದ ನಾಯಕತ್ವಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂಬ ಅರ್ಥದಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದರು.
ಅಮೇರಿಕಾದ ಮಧ್ಯಸ್ಥಿಕೆ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗುತ್ತಿದ್ದೂ ಕದನ ವಿರಾಮ ಎಂದ ಮೇಲೆ ಮತ್ತೆ ಏಕೆ ದಾಳಿ ಎಂದ ಭಾರತೀಯರು ಇದು ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನಿಸುವಂತಾಗಿದೆ.
ಇದನ್ನು ಓದಿ : ಗುಜರಿ ಗೋಡೌನ್ ಗೆ ಬೆಂಕಿ. ಅಪಾರ ಹಾನಿ.