ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ (Belagavi): ಇನ್ನೂ ಐದು ವರ್ಷಗಳವರೆಗೆ ಒಂದು ಹೊಸ ರೋಗ ಬರುವ ಸೂಚನೆ ಇದೆ.  ಈ ರೋಗ ಮತ್ತೊಂದು ರೂಪವನ್ನು ತಾಳಿ ವಾಯು ರೂಪದಲ್ಲಿ ಹರಡಲಿದೆ ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು (ಕೋಡಿಶ್ರೀ)  ಸ್ಫೋಟಕ ಭವಿಷ್ಯ ನುಡಿದಿದ್ದಾರೆ

ವಾಯುಮಾಲಿನ್ಯ ಮತ್ತು ಭೂಮಾಲಿನ್ಯ ಆಗಿದೆ, ಜಲಮಾಲಿನ್ಯವೂ ಆಗಿದೆ. ಯಾವುದೂ ನಮಗೆ ಒಳ್ಳೆ ರೀತಿಯಲ್ಲಿ ಸಿಕ್ತಿಲ್ಲ. ಹಾಗಾಗಿ ಜನರ ತಮ್ಮ ಜಾಗೃತೆಯಲ್ಲಿರೋದು ಸೂಕ್ತ ಎಂದ ಶ್ರೀ ಗಳು,  ಈ ಬಾರಿ ಬರುವಂತಹ ಖಾಯಿಲೆ ಬಹಳ ಘೋರವಾಗಿದೆ ಎಂದಿದ್ದಾರೆ.

ವಾಯುರೂಪದಲ್ಲಿ ಕಫ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಲಕ್ಷ್ಮಣಗಳಿವೆ. ಈ ಗಂಡಾಂತರ ಇಡೀ ಲೋಕಕ್ಕೇ ಇದೆ. ಇದರ ಆಯಸ್ಸು ಐದು ವರ್ಷ ಇರಬಹುದು. ಮಧ್ಯದಲ್ಲಿ ಕಡಿಮೆಯಾಗಿ ಮತ್ತೆ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

ಇದನ್ನು ಓದಿ : ಭಟ್ಕಳ ಪೊಲೀಸರ ಕಾರ್ಯಾಚರಣೆ, ಮೂವರ ಬಂಧನ.

ಬಾರೀ ಮಳೆಯಿಂದ ಕೊಚ್ಚಿ ಹೋದ ಹೆದ್ದಾರಿ.  ಶಿರಸಿ-ಕುಮಟಾ ರಸ್ತೆ ಸಂಚಾರ ತಾತ್ಕಾಲಿಕ ಸ್ಥಗಿತ.

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು. ಪೋಷಕರು ಕಂಗಾಲು