ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಸಮುದ್ರ ಹಾಗೂ ನದಿಗಳಲ್ಲಿ ನೀರಿನ ಹೆಚ್ಚಳದಿಂದ ಬೃಹತ್ ಅಲೆಗಳು ಎಳುತ್ತಿದ್ದು ಮತ್ತು ನದಿಗಳು ಅಪಾಯದ ಮಟ್ಟದಲ್ಲಿ ವೇಗವಾಗಿ ಹರಿಯುತ್ತಿರುವುದರಿಂದ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಸಪ್ಟಂಬರ್ 30 ರವರೆಗೆ ಸಾರ್ವಜನಿಕ ಹಾಗೂ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೋಟಿಂಗ್ ನಿಷೇಧಿಸಲಾಗಿದೆ (Boating Banned) ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯ ತಿಳಿಸಿದ್ದಾರೆ.
ಮುಂಗಾರು ಪೂರ್ವದ ಮಳೆಯಿಂದ ಹಾಗೂ ಮುಂಗಾರು ಮಳೆಯ(Mansoon Rain) ಪ್ರಾರಂಭದ ಸುರಕ್ಷತೆಯ ಹಿತದೃಷ್ಟಿಯಿಂದ ಉತ್ತರಕನ್ನಡ ಜಿಲ್ಲೆಯ ಕಡಲತೀರ, ನದಿ ಹಾಗೂ ನದಿತೀರಗಳಲ್ಲಿ ಪ್ರವಾಸಿ ಬೋಟಿಂಗ್(Tourist Boating) ಚಟುವಟಿಕೆ ನಡೆಸುವುದು ಸೂಕ್ತವಾಗಿರದ ಹಿನ್ನೆಲೆಯಲ್ಲಿ , ಜಿಲ್ಲೆಯ ಸಮುದ್ರತೀರ, ನದಿತೀರ ಹಾಗೂ ನದಿಗಳಲ್ಲಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆಗಳನ್ನು ನಿಷೇಧಿಸಲಾಗಿದೆ.
ಸಪ್ಟೆಂಬರ್ 30 ರ ನಂತರ ಬೋಟಿಂಗ್ ಚಟುವಟಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಿಂದ ಸೂಕ್ತ ನಿರ್ದೇಶನ ನೀಡಲಾಗುವುದು. ಅನಧಿಕೃತವಾಗಿ ಬೋಟಿಂಗ್ ಚಟುವಟಿಕೆ ಕೈಗೊಂಡಲ್ಲಿ ಸದರಿ ಬೋಟ್ ಮಾಲೀಕರನ್ನು ನೀಡಿದ ಪರವಾನಿಗೆಯನ್ನು ರದ್ದು ಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಮುಖ ಕಡಲತೀರ / ನದಿತೀರಗಳಲ್ಲಿ ಪೊಲೀಸ್ ಇಲಾಖೆಯಿಂದ ಗಸ್ತು ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ : ನೂಜ್ ಅರಣ್ಯದಲ್ಲಿ ಇಸ್ಪಿಟ್ ಆಟ. ಪೊಲೀಸರ ದಾಳಿ. ಹಲವರ ಬಂಧನ.