ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನೆಲಮಂಗಲ(Nelamangal) :  ಬಿಜೆಪಿಯ ಮಾಜಿ ಸಂಸದ(Bjp Former MP) ಅನಂತಕುಮಾರ್‌ ಹೆಗಡೆ (Ananth Kumar Hegde) ಅವರಿದ್ದ ಕಾರು ಓವರ್ ಟೇಕ್ ಮಾಡಿದ್ದಕ್ಕೆ ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಹಲ್ಲೆ ಮಾಡಿದ ಘಟನೆ ಹಳೇ ನಿಜಗಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ (National Highway 4)ನೆ ನಡೆದಿದೆ.

ಅನಂತಕುಮಾರ ಪುತ್ರ, ಗನ್‌ಮ್ಯಾನ್‌ ಮತ್ತು ಕಾರು ಚಾಲಕ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.  ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದ್ದು ಈ ವೇಳೆ, ಅನಂತಕುಮಾರ್ ಹೆಗಡೆ ಅವರು ಇದ್ದ ಕಾರನ್ನು ಮತ್ತೊಂದು ಕಾರು ಓವರ್​​ಟೇಕ್​ ಮಾಡಿದೆ. ಓವರ್‌ಟೇಕ್‌ ಮಾಡಿದ್ದಕ್ಕೆ ಅನಂತಕುಮಾರ್ ಹೆಗಡೆ ಕಾರು ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್ ಮತ್ತು ಅನಂತ್ ಕುಮಾರ್ ಹೆಗಡೆ ಅವರ ಪುತ್ರ ಆಶುತೋಷ್ ಮತ್ತೊಂದು ಕಾರಿನಲ್ಲಿದ್ದ ಸಲ್ಮಾನ್, ಸೈಪ್, ಇಲಿಯಾಜ್ ಖಾನ್, ಗುಲಷಿರ್ ಉನ್ನಿಸಾ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ  ಎಂಬ ಆರೋಪ ಕೇಳಿಬಂದಿದೆ.

ಹಲ್ಲೆಯಿಂದ ಗಾಯಗೊಂಡವರನ್ನು ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ(Dabaspete Govt Hospital) ದಾಖಲಿಸಲಾಗಿದೆ. ಪ್ರಕರಣ ಸಂಬಂಧ ನೆಲಮಂಗಲ ಡಿವೈಎಸ್‌ಪಿ(Nelamangal Dysp) ಕಚೇರಿಯಲ್ಲಿ ಅನಂತಕುಮಾರ್‌ ಹೆಗಡೆ, ಚಾಲಕ ಮತ್ತು ಗನ್​ಮ್ಯಾನ್​ನನ್ನು ಡಿವೈಎಸ್ಪಿ ಜಗದೀಶ್ ವಿಚಾರಣೆ ನಡೆಸಿದ್ದಾರೆ. ಅನ್ಯ ಕೋಮಿನವರ ಮೇಲೆ ಹಲ್ಲೆ ಮಾಡಿರುವುದನ್ನು ಅನಂತಕುಮಾರ್ ಹೆಗಡೆ ಕಾರು ಚಾಲಕ ಮತ್ತು ಗನ್​ಮ್ಯಾನ್​ ಒಪ್ಪಿಕೊಂಡಿದ್ದಾರೆ.

“ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ, ಹಿಂದಿನಿಂದ ಬಂದ ಇನ್ನೊವಾ ಕಾರು ಓವರ್ ಟೇಕ್ ಮಾಡಿತು. ಓವರ್ ಟೇಕ್ ಮಾಡಿದ ಕಾರು ನಮ್ಮ ಕಾರಿಗೆ ಟಚ್ ಆಗುವ ಸಂದರ್ಭ ಹಿನ್ನೆಲೆಯಲ್ಲಿ ಚಾಲಕ ಕೇಳಿದ್ದಾನೆ. ಅವರೂ ಕೂಡಾ ಬೈದಿದ್ದಾರೆ ಮಾತಿಗೆ ಮಾತು ಬೆಳೆದಿದೆ” ಎಂದು ಅನಂತ್​ ಕುಮಾರ್ ಹೆಗಡೆ ಈ ವೇಳೆ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ದಾಬಸ್ ಪೇಟಿ ಪೊಲೀಸ್ ಠಾಣೆಯಲ್ಲಿ(Dabaspete Police Station) ದೂರು ದಾಖಲಾಗಿದೆ.

ಇದನ್ನು ಓದಿ : ಇನ್ಮುಂದೆ ಈ ಪ್ರಸಿದ್ದ ಧಾರ್ಮಿಕ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ.

ಶಾಲೆ ವಿಷಯಕ್ಕೆ ರಾಜಕಾರಣ. ಎಸ್ಡಿಎಂಸಿ ಸದಸ್ಯರ ಸಾಮೂಹಿಕ ರಾಜೀನಾಮೆ.