ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi) : ತಾಲೂಕಿನ ಬೈರುಂಬೆ ಹೋಂ ಸ್ಟೇ ನಲ್ಲಿ ಕಾನೂನು ಬಾಹಿರವಾಗಿ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ(Police Raid) ನಡೆಸಿ ಹಲವರನ್ನ ಲಾಕ್ ಮಾಡಿದ್ದಾರೆ.
ಇಲ್ಲಿನ ವಿ ಆರ್ ಆರ್ ಹೋಂ ಸ್ಟೇ ಮೇಲೆ ದಾಳಿ ನಡೆಸಲಾಗಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ 19 ಜನರನ್ನ ಬಂಧಿಸಲಾಗಿದೆ. ಬಂಧಿತರೆಲ್ಲರೂ ಹಾವೇರಿ(Haveri) , ದಾವಣಗೆರೆ(Davanagere) ಭಾಗದವರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡ್ಲೆಗುಂದಿಯ ಅನೀಲಕುಮಾರ ಜಿ.ಆರ್. ರುದ್ರಪ್ಪ ರೆಡ್ಡಿ (30), ಹಾವೇರಿಯ ಕನಕಾಪುರದ ಭೀರಪ್ಪ ತಪಕ್ಕೀರಪ್ಪ ಕೇರೆಗೌಡರ (42), ದಾವಣಗೆರೆ ಜಿಲ್ಲೆಯ ದುಗ್ಗಮ್ಮನಪೇಟೆಯ ಬೀರೇಶ ಗೋಣೆಪ್ಪ (26), ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿಯ ಶಂಕರಗೌಡ ವಿರುಪಾಕ್ಷ ಗೌಡ ಪಾಟೀಲ್ (೪೮48), ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ತಿಮ್ಮಾಪುರದ ನಾಗರಾಜ ಈರಪ್ಪ ರಿತ್ತಿ (44), ಹಾವೇರಿ ಜಿಲ್ಲೆಯ ಸಂಗೂರಿನ ಪ್ರದೀಪ ರುದ್ರಪ್ಪ ಅರಿಕೇರೆ (48), ಹಾವೇರಿ ಜಿಲ್ಲೆಯ ಶಿಗ್ಗಾಂವ ಸಮೀಪದ ಶಡಗರವಳ್ಳಿಯ ಪ್ರಶಾಂತ ರಾಮಣ್ಣ ಹಸನಾಬಾದಿ (35), ದಾವಣಗೆರೆ ನಿಟ್ಟುವಳ್ಳಿಯ ಜಬಿವುಲ್ಲಾ ಮಾಬೂ ಸಾಬ್ (38), ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಲ್ಲೂರಿನ ರೇವಣಸಿದ್ದಯ್ಯ ವೀರಯ್ಯ ಹಿರೇಮಠ (45), ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಮೇಡ್ಲೆರಿಯ ಈಶಪ್ಪ ಮಾಲತೇಶಪ್ಪ ಬಡಿಗೇರ (40), ರಾಣಿಬೆನ್ನೂರಿನ ಅಸುಂಡಿಯ ಪ್ರಕಾಶ ಮಲ್ಲಪ್ಪ ಸಿದ್ದಣ್ಣನವರ (44), ದಾವಣಗೆರೆಯ ಮಲ್ಲಿಕಾರ್ಜುನ ಸೋಮಪ್ಪ (40), ದಾವಣಗೇರೆಯ ದುಗ್ಗಮ್ಮ ದೇವಸ್ಥಾನ ಸಮೀಪದ ಬಸವರಾಜ ಜಿ.ಆರ್ ರಾಮಪ್ಪ (41), ದಾವಣಗೆರೆಯ ಜೋಹಾರನಗರದ ಚಮನಸಾಬ್ ಮೇಹಬೂಬ ಸಾಬ್ (39), ಹಾವೇರಿ ಜಿಲ್ಲೆಯ ಕನಕಾಪುರದ ಬಸವರಾಜ ಮಲ್ಲಪ್ಪ ತಿಪ್ಪಣ್ಣನವರ (35), ಹಾವೇರಿ ಜಿಲ್ಲೆಯ ಶಿವಾಜಿನಗರದ 4 ನೇ ಕ್ರಾಸ್ ನ ಈರಣ್ಣ ಅಭಿನಂದನ ದಿನಕರ (38),
, ರಾಣಿಬೆನ್ನೂರಿನ ಹುಣಸಿಕಟ್ಟೆಯ ಸಂತೋಷ ಗುಡ್ಡಪ್ಪ ರಾವತನಕಟ್ಟೆ (31), ರಾಣಿಬೆನ್ನೂರಿನ ಕಂಚಿಗಾರ ಓಣಿಯ ವೀರಬಸಪ್ಪ ಹೊಳೆಬಸಪ್ಪ ಕಾಯಕದ (45 ), ದಾವಣಗೇರೆಯ ನೀಟ್ಟವಳ್ಳಿಯ ಚೇತನ ಎನ್ ನಾಗರಾಜ ಕೆ (36) ಬಂಧಿತರು.
ಖಚಿತ ಮಾಹಿತಿ ಪಡೆದ ಶಿರಸಿ ಡಿವೈಎಸ್ಪಿ(Sirsi DYSP) ಗೀತಾ ಪಾಟೀಲ್ ಸಿಬ್ಬಂದಿಗಳೊಂದಿಗೆ ರೆಸಾರ್ಟ್ ಮೇಲೆ ದಾಳಿ ನಡೆಸಿದರು. ಈ ವೇಳೆ ಇಸ್ಪೀಟ್ ಎಲೆ ಜೊತೆ 49,50,436ರೂ. ವಶಕ್ಕೆ ಪಡೆಯಲಾಗಿದೆ. ದುಡ್ಡಿನೊಂದಿಗೆ ಸಿಕ್ಕಿ ಬಿದ್ದರು. ರೆಸಾರ್ಟಿನಲ್ಲಿದ್ದ ಜೂಜುಕೋರರಿಂದ 4 ಕಾರು, 18 ಮೊಬೈಲುಗಳನ್ನು ವಶಕ್ಕೆ ಪಡೆದರು.
ಜೂಜಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದ ಡಾ ಬಸವರಾಜ ವೀರಾಪುರ ಸೇರಿ ಎಲ್ಲಾ ಜೂಜುಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಶಿರಸಿ ಗ್ರಾಮೀಣ ಪೊಲೀಸ್(Sirsi Rural Station) ಠಾಣೆಯ ಎಎಸ್ಐ ಪ್ರಕಾಶ ತಳವಾರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಕಾರವಾರ ಅರ್ಬನ್ ಬ್ಯಾಂಕ್ ಗೆ ಆರ್ಬಿಐ ಶಾಕ್. ಪರವಾನಿಗೆ ರದ್ದು.
ಮದುವೆಯಾದ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ. ನ್ಯಾಯಮೂರ್ತಿಗಳೆ ಶಾಕ್.
ಧರ್ಮಸ್ಥಳ ಪ್ರಕರಣದ ತನಿಖೆಗೆ ಉತ್ತರಕನ್ನಡ ಜಿಲ್ಲೆಯ ಸೇರಿ 20 ಖಡಕ್ ಅಧಿಕಾರಿಗಳು.
